ಬೀಜಿಂಗ್: ನಾಯಿಗಳು ತಮ್ಮ ಒಡೆಯರ ಜತೆ ನಿಕಟ ಬಂಧ ಹೊಂದಿರುತ್ತವೆ. ಮನುಷ್ಯರನ್ನು ಹಚ್ಚಿಕೊಂಡು ಅವರು ಹೇಳಿದ್ದೆಲ್ಲ ಮಾಡಲು ಕಲಿಯುತ್ತವೆ. ತನ್ನ ಮಾಲೀಕನಿಗಾಗಿ ಏನೆಲ್ಲ ಮಾಡಲೂ ಸಿದ್ಧವಾಗುತ್ತವೆ.
ವುಹಾನ್ ನ ಯಾಂಗ್ಟಜ್ ನದಿಯಲ್ಲಿ ಯಜಮಾನ ಹಾರಿ ಆತ್ಮಹತ್ಯೆ ಮಾಡಿಕೊಂಡ ನಂತರ ಆತನ ನಾಯಿ ನಾಲ್ಕು ದಿನದವರೆಗೆ ಅದೇ ನದಿಯ ಸೇತುವೆಯ ಮೇಲೆ ಆತನಿಗಾಗಿ ಕಾದ ಘಟನೆ ಚೀನಾದಲ್ಲಿ ನಡೆದಿದೆ.
ಚೀನಾದ ಡೇಲಿ ಮೇಲ್ ಈ ಕುರಿತು ವರದಿ ಮಾಡಿದ್ದು, ನಾಯಿ ಯಾಂಗ್ಟಜ್ ಸೇತುವೆ ಮೇಲೆ ಕುಳಿತ ಫೋಟೋ ಸಾಕಷ್ಟು ವೈರಲ್ ಆಗಿದೆ.
ಕ್ಸು ಎಂಬ ಸ್ಥಳಿಯರೊಬ್ಬರು ಆ ನಾಯಿಯನ್ನು ತಮ್ಮ ಮನೆಗೆ ಕರೆದೊಯ್ಯಲು ಯತ್ನಿಸಿದರು. ಆದರೆ, ನಾಯಿ ಕೈಗೆ ಸಿಗದೇ ಓಡಿ ಹೋಗಿದೆ.
“ನಾಯಿ ಅದರ ಮಾಲೀಕನ ಹಿಂದೆ ಮೇ 30 ಕ್ಕೆ ಹೋಗಿದೆ. ಆದರೆ, ಇದು ಯಾವುದೇ ಸಿಸಿ ಕ್ಯಾಮರಾ ವಿಡಿಯೋದಲ್ಲಿ ಕಂಡು ಬಂದಿಲ್ಲ. ನಮ್ಮ ಸ್ವಯಂ ಸೇವಕರು ಈಗ ವಿಡಿಯೋ ದಾಖಲೆ ಹುಡುಕಲು ಪ್ರಾರಂಭಿಸಿದ್ದಾರೆ” ಎಂದು ವುಹಾನ್ ಸಣ್ಣ ನಾಯಿಗಳ ರಕ್ಷಣಾ ಸಂಘದ ಅಧ್ಯಕ್ಷ ಡು ಫನ್ ಹೇಳಿದ್ದಾರೆ ಎಂದು ಡೇಲಿ ಮೇಲ್ ವರದಿ ಮಾಡಿದೆ.