ಜಪಾನ್ ಮೃಗಾಲಯದಲ್ಲಿ ಕಳೆದ ತಿಂಗಳು ಜನಿಸಿದ್ದ ಪಾಂಡಾವನ್ನ ಗಂಡು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಇದೀಗ ಆ ಪಾಂಡಾ ಹೆಣ್ಣು ಎಂಬ ವಿಚಾರ ಸಿಬ್ಬಂದಿ ಗಮನಕ್ಕೆ ಬಂದಿದೆ.
ನವೆಂಬರ್ 22ರಂದು ಜನಿಸಿದ್ದ ಮರಿ ಪಾಂಡಾದ ಗುದದ್ವಾದ ಹಾಗೂ ಮೂತ್ರ ದ್ವಾರ ಸಾಮಾನ್ಯಕ್ಕಿಂತ ಹೆಚ್ಚು ಉದ್ದ ಇದ್ದಿದ್ದರಿಂದ ಇದನ್ನ ಗಂಡು ಎಂದು ಪರಿಗಣಿಸಲಾಗಿತ್ತು.
ಆದರೆ ಮರಿ ಜನಿಸಿದ ಒಂದು ತಿಂಗಳ ನಂತರ ಪಾಂಡಾ ಮರಿಗೆ ವೃಷಣ ಇಲ್ಲದ್ದನ್ನ ಗಮನಿಸಿದ ಸಿಬ್ಬಂದಿಗೆ ತಮ್ಮ ತಪ್ಪಿನ ಅರಿವಾಗಿದೆ.
ಪಾಂಡಾಗಳ ವಿಷಯದಲ್ಲಿ ಪ್ರಾಣಿಗಳು ಅಭಿವೃದ್ಧಿಯಾಗದ ಸಂತಾನೋತ್ಪತ್ತಿ ಅಂಗಗಳನ್ನ ಹೊಂದುವುದರಿಂದ ಅವುಗಳ ಸಂತಾನೋತ್ಪತ್ತಿ ಕ್ರಿಯೆಗೆ ತೊಡಕು ಉಂಟಾಗುತ್ತೆ ಎಂದು ತಜ್ಞರು ಹೇಳಿದ್ದಾರೆ.
2005ರಲ್ಲೂ ಇದೇ ರೀತಿಯ ತಪ್ಪು ಗ್ರಹಿಕೆಯಿಂದಾಗಿ ಹೆಣ್ಣು ಪಾಂಡಾವನ್ನ ಗಂಡು ಎಂದು ಪರಿಗಣಿಸಲಾಗಿತ್ತು.