ಪ್ರತಿನಿತ್ಯ 11 ಲೀಟರ್ ಕೋಲ್ಡ್ ಡ್ರಿಂಕ್ಸ್ ಹಾಗೂ ಕೆಜಿಗಟ್ಟಲೇ ಫಾಸ್ಟ್ ಫುಡ್ ತಿನ್ನುವ ಚಟ ಬೆಳೆಸಿಕೊಂಡು 208 ಕೆಜಿಯಷ್ಟು ದೇಹ ತೂಕ ಹೊಂದಿದ್ದ ಯುವಕನೊಬ್ಬ 113 ಕೆಜಿ ತೂಕ ಇಳಿಸಿಕೊಂಡು ಮೆರೈನ್ ಕಮಾಂಡೋ ಆಗಿದ್ದಾನೆ.
ಅಡನ್ ಪ್ರೆಸ್ಕಾಟ್ ಎಂಬ ಈತ ಒಂದು ಹಂತದಲ್ಲಿ ತನ್ನ ಶೂ ಲೇಸ್ ಕಟ್ಟಿಕೊಳ್ಳಲಾರದಷ್ಟು ಸ್ಥೂಲಕಾಯಿಯಾಗಿದ್ದ. ತನ್ನ ಜೀವನದ ಕನಸನ್ನು ಈಡೇರಿಸಿಕೊಳ್ಳುವ ಆಶಯದಿಂದ ಮೂರು ವರ್ಷಗಳ ಹಿಂದಿನಿಂದ ತೂಕ ಇಳಿಸಿಕೊಳ್ಳುವ ಕಾಯಕಕ್ಕೆ ಇಳಿದಿದ್ದ.
ಪಿಜ್ಝಾ, ಬರ್ಗರ್ ಹಾಗೂ ವಿಪರೀತ ಸಕ್ಕರೆ ಅಂಶದ ಪಾನೀಯಗಳನ್ನು ಕುಡಿಯುವ ಚಟ ಬೆಳೆಸಿಕೊಂಡಿದ್ದ ಈತ, ಅವೆಲ್ಲವನ್ನೂ ಬಿಟ್ಟು, ನೋಡನೋಡುತ್ತಲೇ ಸಿಕ್ಸ್ ಪ್ಯಾಕ್ಸ್ ಬರಿಸಿಕೊಂಡಿದ್ದಾನೆ. 18 ತಿಂಗಳ ಸತತ ಪರಿಶ್ರಮದಿಂದ ಈಗ ಮೆರೈನ್ ಕಮಾಂಡೋ ಆಗಿರುವ ಈತ ಪ್ರತಿನಿತ್ಯ ವರ್ಕ್‌ಔಟ್ ಮಾಡುತ್ತಾನೆ.