ಮಾನವನಿಗೆ ಅತ್ಯಂತ ಬೇಗ ಹತ್ತಿರವಾಗುವಂತಹ ಪ್ರಾಣಿಯೆಂದರೆ ಶ್ವಾನಗಳು. ಅವುಗಳ ನಿಸ್ವಾರ್ಥ ಪ್ರೀತಿ ಹಾಗೂ ಸ್ವಾಮಿನಿಷ್ಠೆ ಎಂತವರ ಮನಸ್ಸನ್ನ ಬೇಕಿದ್ದರೂ ಕರಗಿಸಿಬಿಡಬಹುದು.
ಇಷ್ಟೊಂದು ಪ್ರೀತಿಯಿಂದ ಸಾಕಿದ ಶ್ವಾನಗಳು ಸತ್ತು ಹೋದವು ಅಂದರೆ ಆ ಕುಟುಂಬಕ್ಕೆ ಆಗುವ ನೋವು ಅನುಭವಿಸಿದವರಿಗೇ ಗೊತ್ತು. ಅದೇ ರೀತಿ ಯುರೋಪ್ನ ಎಸ್ಟೋನಿಯಾದ ನಗರವೊಂದರಲ್ಲಿ ಬರೋಬ್ಬರಿ 12 ವರ್ಷಗಳ ಅಲೆಯುತ್ತಾ ಸ್ಥಳೀಯರ ಪ್ರೀತಿ ಗಳಿಸಿದ್ದ ನಾಯಿಗಾಗಿ ಪ್ರತಿಮೆಯನ್ನ ನಿರ್ಮಿಸಲಾಗಿದೆ.
ಕಪ್ಪು ಹಾಗೂ ಬಿಳಿ ಬಣ್ಣದ ಝೋರಿಕ್ ಎಂಬ ಹೆಸರಿನ ನಾಯಿ ಈ ನಗರದಲ್ಲಿ ಬಹಳ ವರ್ಷಗಳಿಂದ ವಾಸವಿತ್ತು. ಈ ನಗರದಲ್ಲಿದ್ದ ಪ್ರತಿಯೊಬ್ಬರೂ ಕೂಡ ಈ ಶ್ವಾನವನ್ನ ತಮ್ಮದೇ ಮನೆಯ ಅತಿಥಿ ಎಂಬಂತೆ ಉಪಚರಿಸುತ್ತಿದ್ದರು. ಹೀಗಾಗಿ ಈ ಶ್ವಾನ ತನ್ನೆಲ್ಲ ಪ್ರೀತಿಪಾತ್ರರ ಜೊತೆ ಬಹಳ ಸಂತೋಷವಾಗಿತ್ತು.
ಆದರೆ 12 ವರ್ಷದ ಶ್ವಾನ ಅಸುನೀಗಿದ ವಾರ್ತೆ ಕೇಳಿ ಇಲ್ಲಿನ ಜನತೆಗೆ ಆಕಾಶವೇ ಕಳಚಿಬಿದ್ದಂತಾಗಿತ್ತು. ಪ್ರೀತಿಯ ಶ್ವಾನದ ನೆನಪಿಗಾಗಿ ಏನಾದರೂ ಮಾಡಬೇಕೆಂದು ಚರ್ಚಿಸಿದ ನಿವಾಸಿಗಳು ಕೊನೆಗೂ ಝೋರಿಕ್ ಶ್ವಾನದ ಪ್ರತಿಮೆಯನ್ನ ನಿರ್ಮಿಸಿದ್ದಾರೆ.
ನಗರಾದ್ಯಂತ ಪ್ರತಿಮೆಗಾಗಿ ಹಣ ಸಂಗ್ರಹಿಸಿದ ನಿವಾಸಿಗಳು ಆ ಹಣವನ್ನ ಸ್ಥಳೀಯ ಕುಶಲಕರ್ಮಿಗಳಿಗೆ ನೀಡಿ ಈ ಮೂರ್ತಿಯನ್ನ ಕೆತ್ತಿಸಿದ್ದಾರೆ. ಈ ನಾಯಿಯ ಜೊತೆಯಲ್ಲೇ ಒಂದು ಬೆಕ್ಕಿನ ಮೂರ್ತಿಯನ್ನೂ ಕೆತ್ತಲಾಗಿದೆ. ಈ ಶ್ವಾನ ಬೀದಿಯ ಬದಿಯಲ್ಲಿ ಅಲೆಯುತ್ತಿದ್ದ ಇತರೆ ಶ್ವಾನಗಳ ಜೊತೆಗೂ ಎಷ್ಟು ಖುಷಿಯಾಗಿತ್ತು ಅನ್ನೋದನ್ನ ಬಿಂಬಿಸುವ ಸಲುವಾಗಿ ಬೆಕ್ಕೊಂದರ ಮೂರ್ತಿಯನ್ನೂ ಕೆತ್ತಲಾಗಿದೆ.