alex Certify ಅಬ್ಬಬ್ಬಾ..! ಈ ಬಾಲಕನ ಎತ್ತರ ಎಷ್ಟು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಬ್ಬಾ..! ಈ ಬಾಲಕನ ಎತ್ತರ ಎಷ್ಟು ಗೊತ್ತಾ…?

14 ವರ್ಷ ವಯಸ್ಸಿದ್ದಾಗ ನೀವು ಅಬ್ಬಬ್ಬಾ ಅಂದ್ರೆ ಎಷ್ಟು ಉದ್ದ ಇದ್ದಿರಬಹುದು..? 6 ಅಡಿ ಮೀರೋಕ್ಕಂತೂ ಆ ವಯಸ್ಸಲ್ಲಿ ಸಾಧ್ಯವಿಲ್ಲ. ಆದರೆ ಚೀನಾದ ಬಾಲಕನೊಬ್ಬ ಈ ವಯಸ್ಸಲ್ಲಿ ತನ್ನ ಕ್ಲಾಸ್​ಲ್ಲಿ ಎಲ್ಲರಿಗಿಂತ ಉದ್ದ ಅಂತಾ ಹೇಳಿಸಿಕೊಳ್ಳುವ ಜೊತೆ ಜೊತೆಯಲ್ಲಿ ವಿಶ್ವದ ಅತ್ಯಂತ ಉದ್ದದ ಬಾಲಕ ಎಂಬ ಕೀರ್ತಿಗೆ ಪಾತ್ರನಾಗಲು ಸಿದ್ಧತೆ ನಡೆಸುತ್ತಿದ್ದಾನೆ.

ಚೀನಾದ ಸಿಚುಯಾನ್​ ಪ್ರಾಂತ್ಯದ ಲೆಶನ್​ ಪಟ್ಟಣದ ಬಾಲಕ ಕ್ಸಿಯಾವೋ ತನ್ನ 14 ವರ್ಷದ ಬರ್ತ್​ಡೇ ದಿನ 7.25 ಅಡಿ ಎತ್ತರ ದಾಖಲಿಸಿದ್ದಾನೆ. ಹೀಗಾಗಿ ಈತ ಗಿನ್ನೆಸ್​ ರೆಕಾರ್ಡ್​ ಬುಕ್​ನಲ್ಲಿ ತನ್ನ ಹೆಸರನ್ನ ದಾಖಲಿಸಲು ಅರ್ಜಿ ಸಲ್ಲಿಸಿದ್ದಾನೆ.

ನನ್ನ ತರಗತಿಯಲ್ಲಿ ನಾನೇ ಎಲ್ಲರಗಿಂತ ಉದ್ದ. ನನ್ನ ಸ್ನೇಹಿತರೆಲ್ಲ ನಾನು ವಯಸ್ಸಲ್ಲಿ ಅವರಿಗಿಂತ ದೊಡ್ಡವನು ಅಂತಾ ಭಾವಿಸಿಕೊಂಡಿದ್ದು ಇದೆ. ಆದರೆ ನಾನ್ಯಾವತ್ತು ಇದಕ್ಕೆಲ್ಲ ತಲೆಕೆಡಿಸಿಕೊಂಡಿಲ್ಲ. ಗಿನ್ನೆಸ್ ದಾಖಲೆಯ ಬುಕ್​ನಲ್ಲಿ ನನ್ನ ಹೆಸರನ್ನ ಸೇರಿಸೋಕೆ ಕಾತುರನಾಗಿದ್ದೇನೆ ಅಂತಾ ಹೇಳ್ತಾನೆ ಕ್ಸಿಯಾವೋ.

13ರಿಂದ 18 ವರ್ಷ ಒಳಗಿನವರು ಮಾತ್ರ ಈ ದಾಖಲೆಯ ಕ್ಯಾಟಗರಿಗೆ ಬರ್ತಾರೆ. ಈ ಹಿಂದೆ ಅತಿ ಉದ್ದದ ಬಾಲಕ ಎನಿಸಿಕೊಂಡಿದ್ದವ ಈಗಾಗಲೇ 18 ವರ್ಷ ಮೀರಿದ್ದಾನೆ. ಇನ್ನೇನು ಕೆಲವೇ ದಿನಗಳಲ್ಲಿ ಕ್ಸಿಯಾವೋ ಹೆಸರು ವಿಶ್ವ ದಾಖಲೆಯ ಸಾಲಿನಲ್ಲಿ ಸೇರಲಿದೆ ಎಂದು ಗಿನ್ನೆಸ್ ವರ್ಲ್ಡ್​ ರೆಕಾರ್ಡ್​ ಮೂಲಗಳು ತಿಳಿಸಿವೆ,

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...