
ವಾಹನ ಪರವಾನಿಗೆಯನ್ನ ಪಡೆಯುವ ಮುನ್ನ ನಡೆಸಲಾಗುವ ಪರೀಕ್ಷೆಯಲ್ಲಿ ಪಾಸ್ ಆಗಲು ನೀವು ಎಷ್ಟು ಪ್ರಯತ್ನವನ್ನ ಮಾಡಿದ್ದೀರಾ..? ಒಂದರಿಂದ ಎರಡು ಬಾರಿ ಪ್ರಯತ್ನ ಪಟ್ಟಿರಬಹುದೇ..? ಆದರೆ ಪೊಲ್ಯಾಂಡ್ನ 50 ವರ್ಷದ ವ್ಯಕ್ತಿ ಬರೋಬ್ಬರಿ 192 ಪರೀಕ್ಷೆಗಳನ್ನ ಎದುರಿಸಿದ್ದರೂ ಸಹ ವಾಹನ ಪರವಾನಿಗೆಯನ್ನ ಪಡೆಯುವಲ್ಲಿ ಇಲ್ಲಿಯವರೆಗೂ ಯಶಸ್ವಿಯಾಗಿಲ್ಲ..!
ಪಿಯೊಟ್ರೊವ್ ಟ್ರೈಬುನಾಲ್ಸ್ಕಿ ಎಂಬ ಪ್ರದೇಶದ ನಿವಾಸಿಯಾಗಿರುವ ಈ ವ್ಯಕ್ತಿ ಬರೋಬ್ಬರಿ 17 ವರ್ಷಗಳಿಂದ ಡ್ರೈವಿಂಗ್ ಲೈಸೆನ್ಸ್ಗಾಗಿ ಪರೀಕ್ಷೆಗಳನ್ನ ಎದುರಿಸುತ್ತಲೇ ಇದ್ದಾರೆ. ಈ ವ್ಯಕ್ತಿ ಪರೀಕ್ಷೆ ಎದುರಿಸುವ ಪ್ರಯತ್ನ 200ರ ಗಡಿ ಸಮೀಪಿಸುತ್ತಾ ಬಂದರೂ ಸಹ ಡ್ರೈವಿಂಗ್ ಲೈಸೆನ್ಸ್ ಮಾತ್ರ ಇನ್ನೂ ದೊರಕಿಲ್ಲ.
‘ಮೆಟ್ರೋ ಮ್ಯಾನ್’ಗೆ ಬಿಜೆಪಿ ಟಿಕೆಟ್, ಪಾಲಕ್ಕಾಡ್ ನಿಂದ ಶ್ರೀಧರನ್ ಸ್ಪರ್ಧೆ
ಪೊಲ್ಯಾಂಡ್ನ ಡ್ರೈವಿಂಗ್ ಟೆಸ್ಟ್ಗೂ ಮುನ್ನ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ವಿಶೇಷ ಅಂದರೆ ಇಲ್ಲಿ ವ್ಯಕ್ತಿ ಎಷ್ಟು ಬಾರಿ ಬೇಕಿದ್ದರೂ ಪರೀಕ್ಷೆಗಳನ್ನ ಎದುರಿಸಬಹುದು. 50 ವರ್ಷದ ಈ ವ್ಯಕ್ತಿ ಇಲ್ಲಿಯವರೆಗೆ ಪರೀಕ್ಷೆಗಳನ್ನ ಎದುರಿಸಲು ಬರೋಬ್ಬರಿ 1.13 ಲಕ್ಷ ರೂಪಾಯಿಯನ್ನ ವ್ಯಯಿಸಿದ್ದಾರೆ.