alex Certify ಹಜ್ ಯಾತ್ರೆಗೂ ತಟ್ಟಿದ ಕೊರೊನಾ ಬಿಸಿ; ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಜ್ ಯಾತ್ರೆಗೂ ತಟ್ಟಿದ ಕೊರೊನಾ ಬಿಸಿ; ಫೋಟೋ ವೈರಲ್

ಮುಸ್ಲಿಮರ ಪವಿತ್ರ ಕ್ಷೇತ್ರವಾಗಿರುವ ಮೆಕ್ಕಾ ಮದೀನಾದ ಹಜ್ ಯಾತ್ರೆಯೂ ಈ ಬಾರಿ‌ ಕೊರೊನಾ ಹೊಡೆತಕ್ಕೆ ಸಿಲುಕಿದ್ದು, ಕೇವಲ ಸಾವಿರ ಲೆಕ್ಕದಲ್ಲಿ ಜನರು ಆಗಮಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮೆಕ್ಕಾ ಮದೀನದ ಹಜ್ ಯಾತ್ರೆಯ ವೇಳೆ ಕಾಬಾ ಬಳಿ ತೆರಳಿ ಪ್ರಾರ್ಥನೆ ಸಲ್ಲಿಸುವುದು ಮುಸ್ಲಿಂ ‌ಸಮದಾಯದಲ್ಲಿ ನಡೆದುಬಂದಿದೆ. ಪ್ರತಿವರ್ಷ ಈ ಸಮಯದಲ್ಲಿ ಕೋಟ್ಯಾಂತರ ಮಂದಿ ಹಲವು ದೇಶಗಳಿಂದ ಆಗಮಿಸುತ್ತಾರೆ. ಆದರೆ ಈ ಬಾರಿ ಕೊರೊನಾ ಮಹಾಮಾರಿ ವಿಶ್ವವನ್ನು ಕಾಡುತ್ತಿರುವುದರಿಂದ, ಕೇವಲ ಒಂದು ಸಾವಿರ ಜನರಿಗೆ ಪ್ರವೇಶ ನೀಡಲಾಗಿದೆ. ಅದರಲ್ಲೂ ಸೌದಿ ಅರೇಬಿಯಾದಲ್ಲಿರುವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದೀಗ ಕೇವಲ ಒಂದು ಸಾವಿರ ಜನ ಭಕ್ತರು, ಸಾಮಾಜಿಕ‌ ಅಂತರದೊಂದಿಗೆ ದರ್ಶನ ಪಡೆಯುತ್ತಿರುವ ದೃಶ್ಯ ವೈರಲ್ ಆಗಿದೆ.

ಈ ಹಿಂದೆ ಹಜ್‌ ಯಾತ್ರೆಯಲ್ಲಿ ಭಾಗವಹಿಸದ, 20-50 ವರ್ಷದೊಳಗಿನವರಿಗೆ ಆದ್ಯತೆ ನೀಡಿದ್ದು, ಆನ್ಲೈನ್ ರಿಜಿಸ್ಟರ್ ಆದ ಬಳಿಕ ಕೊರೊನಾ ಟೆಸ್ಟ್‌ ಮಾಡಿಸಿದ ಬಳಿಕವೇ ಅವಕಾಶ ನೀಡಲಾಗಿದೆ. ಇದರೊಂದಿಗೆ ಹಜ್ ಯಾತ್ರೆಯ ಬಳಿಕ ಒಂದು ವಾರ ಕ್ವಾರಂಟೈನ್ ನಲ್ಲಿ ಇರಬೇಕು ಎಂದು ಸೂಚನೆ ನೀಡಲಾಗಿದೆ‌.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...