ಕೇಶ ಹಾಗೂ ಕಣ್ಣುಗುಡ್ಡೆಗಳೇ ಇಲ್ಲದ ಬೆಕ್ಕೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ. ಜಾಸ್ಪರ್ ಹೆಸರಿನ ಈ ಬೆಕ್ಕಿಗೆ ಇನ್‌ಸ್ಟಾಗ್ರಾಂ, ಟಿಕ್‌ಟಾಕ್ ಹಾಗೂ ಫೇಸ್ಬುಕ್‌ನಲ್ಲಿ ಸಾಕಷ್ಟು ಫಾಲೋವರ್‌ಗಳು ಇದ್ದಾರೆ.
ಎರಡು ವರ್ಷದ ಜಾಸ್ಪರ್ ಅನ್ನು ಪೋಷಕರು ದತ್ತು ಪಡೆದುಕೊಂಡಾಗ ಅದು ಆರೋಗ್ಯವಾಗಿತ್ತು. ಆದರೆ ಎರಡು ವರ್ಷಗಳ ಬಳಿಕ ಜಾಸ್ಪರ್‌ಗೆ ಫೇಲೈನ್ ಹರ್ಪೆಸ್ ವೈರಸ್ (FHV) ಹಾಗೂ ಕಾರ್ನಿಯಲ್ ಅಲ್ಸರ್ ಇರುವುದು ಕಂಡುಬಂದಿತ್ತು. ಈ ರೋಗವು ತೀವ್ರವಾದ ಕಾರಣ, ಇನ್ನಷ್ಟು ಡ್ಯಾಮೇಜ್ ಆಗುವುದನ್ನು ತಡೆಗಟ್ಟಲು ಬೆಕ್ಕಿನ ಎರಡೂ ಕಣ್ಣುಗಳನ್ನುತೆಗೆದುಹಾಕಬೇಕಾಯಿತು. ಇವೆಲ್ಲಕ್ಕೂ ಒಗ್ಗಿಕೊಂಡ ಜಾಸ್ಪರ್, ಬಹಳ ಬೇಗ ತನ್ನ ಹೊಸ ಪರಿಸ್ಥಿತಿಗೆ ಹೊಂದಿಕೊಂಡಿದೆ.
ಜಾಸ್ಪರ್‌ಗೆ ಈಗ 12 ವರ್ಷ ವಯಸ್ಸಾಗಿದ್ದು, ಅದರ ಪರಿಸ್ಥಿತಿಯಲ್ಲಿ ಅಲ್ಪ ಚೇತರಿಕೆ ಕಂಡುಬಂದಿರುವ ಕಾರಣ ಇನ್ನಷ್ಟು ವರ್ಷಗಳ ಕಾಲ ಬದುಕುವ ಸಾಧ್ಯತೆ ಇದೆ. ಇನ್‌ಸ್ಟಾಗ್ರಾಂನಲ್ಲಿ 72,900 ಫಾಲೋವರ್ ಗಳಿದ್ದು, ಟಿಕ್‌ಟಾಕ್‌ನಲ್ಲಿ 50,000 ಹಾಗೂ ಫೇಸ್ಬುಕ್‌ನಲ್ಲಿ 12,000 ಹಿಂಬಾಲಕರಿದ್ದು, ಆಗಾಗ ತನ್ನ ಆರೋಗ್ಯದ ಬಗ್ಗೆ ಅಪ್‌ಡೇಟ್‌ಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತದೆ.
https://www.facebook.com/jazzypurrs/videos/638667103538093