![Hairdresser mistakenly wrote Condom instead of Conditioner in the message, her dad thinking she is prostitute](https://www.zoomnews.in/uploads_2019/newses/img_1727530597_sm.webp)
ಒಂದು ತಪ್ಪು ಪದ ಇಡೀ ವಾಕ್ಯದ ಅರ್ಥವನ್ನು ಬದಲಿಸುತ್ತದೆ. ಇಂಗ್ಲೆಂಡ್‌ನ ಕೇಶ ವಿನ್ಯಾಸಕಿ ಮಾಡಿದ ತಪ್ಪು ಹಾಗೂ ಅದ್ರಿಂದಾದ ಪರಿಣಾಮ ಈಗ ಸುದ್ದಿ ಮಾಡಿದೆ. ಆಕೆ ಬಳಸಿದ ತಪ್ಪು ಪದದಿಂದಾಗಿ ಆಕೆಯನ್ನು ಆಕೆ ತಂದೆ ವೇಶ್ಯೆ ಎಂದುಕೊಂಡಿದ್ದ.
ಇಂಗ್ಲೆಂಡ್ ನ 34 ವರ್ಷದ ಕಿರ್ಸ್ಟಿ ಮೆಕೀ ತಾಯಿಗೆ ಮೆಸ್ಸೇಜ್ ಮಾಡಿದ್ದಾಳೆ. ಅದ್ರಲ್ಲಿ ಕಂಡಿಷನರ್ ತರಲು ಹೇಳಿದ್ದಾಳೆ. ತಾಯಿಗೆ ಮೆಸ್ಸೇಜ್ ಮಾಡುವ ವೇಳೆ ಸ್ಪೆಲಿಂಗ್ ತಪ್ಪಾಗಿದೆ. ಕಂಡಿಷನರ್ ಬದಲು ಕಾಂಡೋಮ್ ಆಗಿದೆ. ಅಡುಗೆ ಮನೆಯಲ್ಲಿದ್ದ ತಂದೆ, ತಾಯಿಗೆ ಕಳುಹಿಸಿದ ಮೆಸ್ಸೇಜ್ ನೋಡಿದ್ದಾನೆ. ನಂತ್ರ ಮಗಳನ್ನು ವೇಶ್ಯೆ ಎಂದುಕೊಂಡು ತಾಯಿಗೆ ಹೇಳಿದ್ದಾನೆ.
ಸ್ಪೆಲಿಂಗ್ ತಪ್ಪಾಗಿರುವುದು ಕಿರ್ಸ್ಟಿ ಮೆಕೀಗೆ ಗೊತ್ತಾಗಿರಲಿಲ್ಲವಂತೆ. ತಾಯಿ ಹೇಳಿದ ಮೇಲೆ ಗೊತ್ತಾಯ್ತಂತೆ. ನಾಳೆ ಬೆಳಿಗ್ಗೆ ಕಾಂಡೋಮ್ ತೆಗೆದುಕೊಂಡು ಬರ್ತಿಯಾ. ಕಸ್ಟಮರ್ ಬರ್ತಿದ್ದಾರೆಂದು ಕಿರ್ಸ್ಟಿ ಸಂದೇಶ ಕಳುಹಿಸಿದ್ದಳಂತೆ. ಇದನ್ನು ನೋಡಿದ ತಂದೆ, ತಾಯಿಗೆ ಹೇಳಿದ್ದಾರೆ. ವಯಸ್ಸಾಗಿದ್ದ ತಂದೆ ಈ ಸಂದೇಶ ನೋಡಿ ನನ್ನನ್ನು ತಪ್ಪು ತಿಳಿದಿದ್ದರು. ನಾನು ಮುಜುಗರಕ್ಕೊಳಗಾಗಿದ್ದೆ ಎಂದು ಆಕೆ ಹೇಳಿದ್ದಾಳೆ.