ಯುರೋಪಿಯನ್ ಒಕ್ಕೂಟದ ವೈದ್ಯಕೀಯ ಏಜನ್ಸಿಯನ್ನ ಗುರಿಯಾಗಿಸಿಕೊಂಡು ನಡೆದ ಸೈಬರ್ ದಾಳಿಯಲ್ಲಿ ಕೊರೊನಾ ಲಸಿಕೆಗಳ ಬಗ್ಗೆ ಕದ್ದ ಮಾಹಿತಿಯನ್ನ ಹ್ಯಾಕರ್ಗಳು ಸೋರಿಕೆ ಮಾಡಿದ್ದಾರೆ ಎಂದು ಯುರೋಪಿಯನ್ ಮೆಡಿಸಿನ್ ಏಜೆನ್ಸಿ ಒಪ್ಪಿಕೊಂಡಿದೆ.
ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ ಮೇಲೆ ನಡೆದ ಹ್ಯಾಕರ್ಸ್ ದಾಳಿಯನ್ನ ಕಳೆದ ತಿಂಗಳು ಬಹಿರಂಗ ಪಡಿಸಲಾಗಿತ್ತು. ಹ್ಯಾಕರ್ಸ್ ಕೊರೊನಾ ವೈರಸ್ ಲಸಿಕೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಇಎಂಎ ಮೇಲಿನ ಸೈಬರ್ ಅಟ್ಯಾಕ್ನಲ್ಲಿ ಕೊರೊನಾ ಲಸಿಕೆಗಳಿಗೆ ಸಂಬಂಧಿಸಿದ ದಾಖಲೆಗಳು ಅಂತರ್ಜಾಲದಲ್ಲಿ ಸೋರಿಕೆಯಾಗಿದೆ. ಶೀಘ್ರದಲ್ಲೇ ಅಗತ್ಯ ಕಾನೂನು ಕ್ರಮಗಳನ್ನ ಜಾರಿ ಮಾಡಲಾಗುವುದು ಎಂದು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ ಹೇಳಿದೆ.
ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಸಾಮೂಹಿಕ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭವಾಗಿರುವ ಸಂದರ್ಭದಲ್ಲಿ ಈ ಆಘಾತಕಾರಿ ಸುದ್ದಿ ಬಹಿರಂಗವಾಗಿದೆ.