ಕೊರೋನಾ ಹೆಮ್ಮಾರಿ ವಿಶ್ವದಲ್ಲಿ ಕಾಣಿಸಿಕೊಂಡ ಬಳಿಕ ವಿಶ್ವದ ಮೂಲೆಮೂಲೆಯಲ್ಲಿರುವ ಜಿಮ್ ಹಾಗೂ ಫಿಟ್‌ನೆಸ್ ಕೇಂದ್ರಗಳು ಮುಚ್ಚಿವೆ. ಇದೀಗ ಕ್ಯಾಲಿಫೋರ್ನಿಯದಲ್ಲಿ ಜಿಮ್ ಆರಂಭಿಸಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅವರು ಮಾಡಿರುವ ಪ್ಲಾನ್ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕ್ಯಾಲಿಫೋರ್ನಿಯಾದಲ್ಲಿ ಆರಂಭಗೊಂಡಿರುವ ಜಿಮ್‌ಗಳಲ್ಲಿ ಸಾಮಾಜಿಕ ಅಂತರ ಹಾಗೂ ಒಬ್ಬರಿಂದ ಇನ್ನೊಬ್ಬರಿಗೆ ಸೋಂಕು ಹರಡದಂತೆ ಎಚ್ಚರ ವಹಿಸಲು, ಪ್ಲಾಸ್ಟಿಕ್ ಕವರ್‌ಗಳನ್ನು ಬಳಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ.
ಜಿಮ್‌ನಲ್ಲಿ ಪ್ರತಿಯೊಬ್ಬರು ಕಸರತ್ತು ಮಾಡಲು ಇರುವ ಯಂತ್ರಗಳ ಸುತ್ತ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ. ಒಬ್ಬರು ಜಿಮ್ ಮಾಡುವುದು ಹೊರಗಿರುವ ತರಬೇತುದಾರರಿಗೆ ಕಾಣುತ್ತದೆ. ಆದರೆ ಸೋಂಕು ಹರಡುವುದಿಲ್ಲ. ಇದರೊಂದಿಗೆ ಜಿಮ್ ಮುಗಿಸಿಕೊಂಡು ವ್ಯಕ್ತಿ ಹೊರಹೋಗುತ್ತಿದ್ದಂತೆ, ಜಾಗವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುವುದಂತೆ.
ಪ್ರತಿಯೊಂದು ಪಾಡ್ ಗಳಿಗೂ ಆರು ಅಡಿ ಅಂತರವನ್ನು ಕಾಯ್ದುಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಹರಿದಾಡುತ್ತಿದ್ದು, ನೆಟ್ಟಿಗರು ಈ ಹೊಸ ಪ್ಲಾನ್‌ಗೆ ಶಹಬಾಸ್‌ಗಿರಿ ನೀಡಿದ್ದಾರೆ. ಈ ರೀತಿ ಪ್ಲಾಸ್ಟಿಕ್ ಹೊದಿಕೆಗಳ ಮೂಲಕ ಜಿಮ್ ಸುರಕ್ಷಿತವಾಗಿರಿಸಿದರೆ, ಫಿಟ್‌ನೆಸ್ ಕಾಯ್ದುಕೊಳ್ಳುವುದರೊಂದಿಗೆ ಕೊರೋನಾದಿಂದಲೂ ತಪ್ಪಿಸಿಕೊಳ್ಳಬಹುದು ಎನ್ನುವ ಅಭಿಪ್ರಾಯವನ್ನು ನೆಟ್ಟಿಗರು ಹೊರಹಾಕಿದ್ದಾರೆ.
https://www.instagram.com/p/CA1IZvJjFm0/?utm_source=ig_embed