ಪ್ರಾಣಿಗಳ ನಡುವಿನ ಗೆಳೆತನವನ್ನು ನೋಡುವುದೇ ಒಂದು ಆನಂದ. ನಾಯಿ-ಬೆಕ್ಕು, ಹಸು-ನಾಯಿ, ಕೋತಿ-ಬೆಕ್ಕುಗಳ ನಡುವಿನ ಗೆಳೆತನದ ಬಗ್ಗೆ ಸಾಕಷ್ಟು ಕೇಳಿದ್ದೇವೆ.
ಇದೀಗ ನಾಯಿ ಹಾಗೂ ಡಾಲ್ಫಿನ್ ಒಂದರ ನಡುವಿನ ಗೆಳೆತನದ ಕಥೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗನ್ನರ್ ಎಂಬ ನಾಯಿ ಹಾಗೂ ಡೆಲ್ಟಾ ಎಂಬ ಡಾಲ್ಫಿನ್ಗಳ ನಡುವೆ ಗಾಢವಾದ ಸ್ನೇಹವಿದ್ದು, ಇಬ್ಬರ ನಡವಿನ ನಿಷ್ಕಲ್ಮಷ ಸ್ನೇಹ ಕಂಡ ನೆಟ್ಟಿಗರ ಮನಗೆದ್ದಿದೆ.
ಫ್ಲಾರಿಡಾದ ಸೀಸೈಡ್ ತಾಣವೊಂದರಲ್ಲಿ ಇಬ್ಬರೂ ವಾಸಿಸುತ್ತಿದ್ದು, ಕಳೆದ ಏಳು ವರ್ಷಗಳಿಂದ ಇಬ್ಬರೂ ಬಹಳ ನಿಕಟವಾದ ಸ್ನೇಹಿತರಾಗಿದ್ದಾರೆ.
https://twitter.com/_woollyback/status/1273295000126750721?ref_src=twsrc%5Etfw%7Ctwcamp%5Etweetembed%7Ctwterm%5E1273295000126750721%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fgunner-the-dog-delta-the-dolphin-have-been-best-friends-for-seven-years%2F611087