alex Certify ಮದುವೆ ದಿನವೂ ತನ್ನಿಷ್ಟದ ಗೀಳು ಬಿಡಲಿಲ್ಲ ಭೂಪ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ದಿನವೂ ತನ್ನಿಷ್ಟದ ಗೀಳು ಬಿಡಲಿಲ್ಲ ಭೂಪ….!

ಟರ್ಕಿ: ಆತನಿಗೆ ಫುಟ್ಬಾಲ್ ಮ್ಯಾನೇರ್ ಎಂಬ ವಿಡಿಯೋ ಗೇಮ್ ಮೇಲೆ ಎಷ್ಟರ ಮಟ್ಟಿಗೆ ಗೀಳಿತ್ತು ಎಂದರೆ, ಆತ ತನ್ನ ಮದುವೆ ದಿನವೂ ಆಟ ಬಿಟ್ಟಿಲ್ಲ.!!

ಹೌದು ಟರ್ಕಿಯ ಬರ್ಕ್ ಎಂಬ 28 ವರ್ಷದ ಮದುಮಗನೊಬ್ಬ ತನ್ನ ವಧುವಿನ ಎದುರು‌ ಕುಳಿತು ಲ್ಯಾಪ್ ‌ಟಾಪ್ ನಲ್ಲಿ ವಿಡಿಯೋ ಗೇಮ್ ಆಡುತ್ತಿರುವ ಫೋಟೋವೊಂದು ರೆಡಿಟ್ ನಲ್ಲಿ ವೈರಲ್ ಆಗಿದೆ. ವಧು ಬಿಳಿಯ ಬಟ್ಟೆ ತೊಟ್ಟು ಪೆಚ್ಚು ಮೋರೆ ಹಾಕಿಕೊಂಡು ಕುಳಿತಿದ್ದಾಳೆ.

ನಮ್ಮಿಬ್ಬರ ಜೀವನದ ಕುರಿತು ಒಂದು ವಿಶೇಷ ವಿಡಿಯೋ ಮಾಡಿದ್ದೆ. ಅದನ್ನು ನನ್ನ ಮನದನ್ನೆಗೆ ಮದುವೆ ದಿನ ತೋರಿಸುವ ಇಚ್ಛೆ ಹೊಂದಿದ್ದೆ. ಆದರೆ ವಿಡಿಯೋ ಫೈಲ್ ಗಾತ್ರ ದೊಡ್ಡದಿದ್ದುದರಿಂದ ಅದನ್ನು ಮದುವೆ ಆಯೋಜಕರಿಗೆ ಕಳಿಸಲು ಸಾಧ್ಯವಾಗಿಲ್ಲ. ಹಾಗಾಗಿ ನನ್ನ ಲ್ಯಾಪ್‌ಟಾಪ್ ನ್ನು ಸಮಾರಂಭಕ್ಕೆ ತಂದಿದ್ದೆ. ವಿಡಿಯೋ ಪ್ಲೇ ಮಾಡಲು 30 ನಿಮಿಷ ತಡವಾಗಬಹುದು ಎಂದು ನನ್ನ ಲ್ಯಾಪ್‌ಟಾಪ್ ನಲ್ಲಿ ವಿಡಿಯೋ ಗೇಮ್ ಆಡಲು ಶುರು ಮಾಡಿದೆ ಎಂದು ಬರ್ಕ್ ಹೇಳಿಕೊಂಡಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...