alex Certify ಸಿನಿಮೀಯ ರೀತಿಯಲ್ಲಿ ಮುರಿದುಬಿದ್ದ ಮದುವೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನಿಮೀಯ ರೀತಿಯಲ್ಲಿ ಮುರಿದುಬಿದ್ದ ಮದುವೆ..!

ಸಿನಿಮಾಗಳಲ್ಲಿ ಮದುವೆ ನಡೀತಾ ಇರೋ ವೇಳೆ ಯಾರಾದ್ರೂ ಬಂದು ಮದುವೆ ನಿಲ್ಲಿಸೋದನ್ನ ನೀವು ನೋಡೀರ್ತಿರಾ. ಇಂತಹದ್ದೇ ಒಂದು ಡ್ರಾಮಾ ಝಾಂಬಿಯಾ ದೇಶದ ರಾಜಧಾನಿ ಲುಸಾಕಾ ಪಟ್ಟಣದ ಕ್ಯಾಥೋಲಿಕ್​ ಚರ್ಚ್​ನಲ್ಲಿ ನಡೆದಿದೆ.

ಚರ್ಚ್​ನಲ್ಲಿ ಮದುವೆಯಾಗಲು ನಿಂತಿದ್ದ ನವಜೋಡಿಗೆ ಫಾದರ್​ ಉಪದೇಶವನ್ನ ನೀಡ್ತಾ ಇದ್ದರು. ಇದೇ ವೇಳೆ ಬೆನ್ನಿಗೆ ಮಗುವನ್ನ ಕಟ್ಟಿಕೊಂಡು ಬಂದ ಮಹಿಳೆ ಈತ ನನ್ನ ಪತಿ ಎಂದು ಹೇಳುವ ಮೂಲಕ ನೆರೆದವರ ಹುಬ್ಬೇರುವಂತೆ ಮಾಡಿದ್ದಾಳೆ.

ಮಗುವಿನ ಸಮೇತ ಫಾದರ್​ ಬಳಿ ಹೋದ ಮಹಿಳೆ ಇಲ್ಲಿ ವರನ ರೂಪದಲ್ಲಿ ನಿಂತಿರೋ ಈತ ನನ್ನ ಪತಿ. ಅಲ್ಲದೇ ನನ್ನ ಮಗುವಿನ ತಂದೆ ಕೂಡ. ನಮ್ಮಿಬ್ಬರ ನಡುವೆ ಡಿವೋರ್ಸ್ ಕೂಡ ಆಗಿಲ್ಲ. ಹೀಗಾಗಿ ಈ ಮದುವೆ ನಡೆಯಕೂಡದು ಅಂತಾ ಹೇಳಿದ್ದಾಳೆ.

ಇನ್ನು ಈ ಘಟನೆಯನ್ನ ಅಲ್ಲಿನ ಸ್ಥಳೀಯ ಮಾಧ್ಯಮಗಳು ಪ್ರಸಾರ ಮಾಡಿದ್ದು ವರನ ರೂಪದಲ್ಲಿ ನಿಂತಿದ್ದ ಈ ಪುಣ್ಯಾತ್ಮನಿಗೆ ಮೂವರು ಮಕ್ಕಳಿದ್ದಾರೆ ಅಂತಾ ವರದಿ ಬಿತ್ತರಿಸಿವೆ, ಈ ಎಲ್ಲ ಘಟನೆಯ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ವರನನ್ನ ಬಂಧಿಸಿದ್ದಾರೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...