alex Certify ನಿರ್ಗತಿಕರಿಗಾಗಿ ಮಿಡಿದ 89 ವರ್ಷದ ವೃದ್ಧೆಯ ಮನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿರ್ಗತಿಕರಿಗಾಗಿ ಮಿಡಿದ 89 ವರ್ಷದ ವೃದ್ಧೆಯ ಮನ

ಮಾನವೀಯತೆಗೆ ವಯಸ್ಸಿನ ಮಿತಿ ಇಲ್ಲ ಅನ್ನೋದಕ್ಕೆ ಈ ಸ್ಟೋರಿ ಉತ್ತಮ ಉದಾಹರಣೆ. ಲಾಕ್​ಡೌನ್​ ಸಂದರ್ಭದಲ್ಲಿ ಊಟ ಕಳೆದುಕೊಂಡವರು ಅದೆಷ್ಟೋ ಮಂದಿ. ಇಂತಹ ನಿರ್ಗತಿಕರಿಗಾಗಿ ಮಿಡಿದ 89 ವರ್ಷದ ವೃದ್ಧೆ ಕಳೆದ 7 ತಿಂಗಳಿನಿಂದ ಬಡವರ ಹೊಟ್ಟೆ ತಣಿಸುವ ಕಾರ್ಯ ಮಾಡ್ತಿದ್ದಾರೆ.

ಪ್ಲೋ ಓಸ್ಬಾರ್​ ಎಂಬ ಹೆಸರಿನ ವೃದ್ಧೆ ಲಾಕ್​ಡೌನ್​ ಸಂದರ್ಭದಲ್ಲಿ ನಿರ್ಗತಿಕರಿಗೆ ಸಹಾಯ ಮಾಡುವುದಕ್ಕೋಸ್ಕರ ಹದಿಹರೆಯದವರಂತೆ ಶ್ರಮಿಸಿದ್ದಾರೆ. ಮೊಮ್ಮಕ್ಕಳ ಜೊತೆ ಹಾಯಾಗಿ ಸಮಯ ಕಳೆಯಬೇಕಾದ ವಯಸ್ಸಲ್ಲಿ ಈ ವೃದ್ಧೆ ಹಸಿದ ಮಕ್ಕಳು ಹಾಗೂ ವೃದ್ಧರಿಗಾಗಿ ಆಹಾರ ತಯಾರಿಸಿ ಹಂಚಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ವೃದ್ಧೆ, ನಿರ್ಗತಿಕರಿಗೆ ಸಹಾಯವಾಗಲಿ ಅಂತಾ ನಾನು ಈ ಕೆಲಸ ಮಾಡ್ತಿದ್ದೇನೆ. ಚಿಕ್ಕ ಮಕ್ಕಳಿಗೆ ಸಹಾಯ ಮಾಡೋಕೆ ನನಗೆ ತುಂಬಾನೇ ಇಷ್ಟ. ಕೆಲವರು ನನ್ನನ್ನ ಹುಚ್ಚಿ ಎಂದಿದ್ದಿದೆ. ಆದರೆ ನಾನು ಮಾತ್ರ ಕಳೆದ 7ತಿಂಗಳಿನಿಂದ ನನ್ನ ಸೇವೆ ಮಾಡ್ತಿದ್ದೇನೆ ಅಂತಾ ಹೇಳಿದ್ರು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...