alex Certify ಬಾರ್ ಆಯ್ತು ಮಹಾಯುದ್ಧದ ಸಂದರ್ಭದಲ್ಲಿ ನಿರ್ಮಿಸಲಾಗಿದ್ದ ಬಂಕರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾರ್ ಆಯ್ತು ಮಹಾಯುದ್ಧದ ಸಂದರ್ಭದಲ್ಲಿ ನಿರ್ಮಿಸಲಾಗಿದ್ದ ಬಂಕರ್…!

ಭಾರತೀಯ ಮೂಲದ 68 ವರ್ಷದ ವೃದ್ಧ ಕಳೆದ 40 ವರ್ಷಗಳಿಂದ ವಾಸಿಸುತ್ತಿದ್ದ ಮನೆಯಲ್ಲಿರುವ ಎರಡನೇ ಮಹಾಯುದ್ಧ ಕಾಲದ ವಾಯು ದಾಳಿ ಆಶ್ರಯವನ್ನ ಪತ್ತೆ ಹಚ್ಚಿದ್ದಾರೆ.

ಹುಲ್ಲುಹಾಸಿನ ಕೆಳಗೆ ಈ ಆಶ್ರಯ ಕೊಠಡಿ ನಿರ್ಮಾಣ ಮಾಡಲಾಗಿದ್ದು ಮ್ಯಾನ್​ಹೋಲ್​ ಪರಿಶೀಲನೆ ಮಾಡುತ್ತಿದ್ದ ವೇಳೆ ಇದು ಪತ್ತೆಯಾಗಿದೆ.

ಇಂಗ್ಲೆಂಡ್​ ವೋಲ್ವರ್​ ಹ್ಯಾಂಪ್ಟನ್​​ನ ನಿವಾಸಿ ಖಂಡು ಪಟೇಲ್​​ ಶಾಲೆಯೊಂದರ ಉಸ್ತುವಾರಿ ವಹಿಸಿದ್ದಾರೆ. ತಮ್ಮ ಮನೆಯ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ಸಂಶೋಧನೆ ಮಾಡಿದ್ದಾರೆ.

ಪಟೇಲ್​ ವಾಸ್ತವ್ಯ ಹೂಡಿರುವ ಮನೆ 1920ರ ದಶಕದಲ್ಲಿ ನಿರ್ಮಿಸಲಾಗಿದೆ. ಅಲ್ಲದೇ ಈ ಮನೆಯ ಹಿಂದಿನ ಮಾಲೀಕರು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಈ ರಹಸ್ಯ ಕೊಠಡಿ ನಿರ್ಮಾಣ ಮಾಡಿದ್ದರು ಎನ್ನಲಾಗಿದೆ.

ಕುತೂಹಲಕಾರಿ ವಿಚಾರ ಏನಂದ್ರೆ, ಕಳೆದ 40 ವರ್ಷಗಳಿಂದ ಪಟೇಲ್​ ಹಾಗೂ ಪತ್ನಿ ಉಷಾ ಇದೇ ಮನೆಯಲ್ಲಿ ವಾಸಿಸುತ್ತಿದ್ರೂ ಅವರಿಗೆ ಈ ಆಶ್ರಯದ ಬಗ್ಗೆ ಯಾವುದೇ ಸುಳಿವು ಇರಲಿಲ್ಲವಂತೆ. ಸ್ನೇಹಿತರ ಸಹಾಯದಿಂದ ಪಟೇಲ್​ ದಂಪತಿ ಈ ಆಶ್ರಯ ತಾಣವನ್ನ ಬಾರ್​ ಆಗಿ ಪರಿವರ್ತಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...