
ವಯಸ್ಸಾದ ಸಿಲ್ವರ್ ಬ್ಯಾಕ್ ಗೋರಿಲ್ಲ ಸೌಮ್ಯವಾದ ಕೆಮ್ಮಿನಂತಹ ಲಕ್ಷಣಗಳನ್ನ ಹೊಂದಿತ್ತು. ಇದಾದ ಬಳಿಕ ಗೋರಿಲ್ಲವನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಿದ ವೇಳೆ ಸೋಂಕು ಇರೋದು ದೃಢಪಟ್ಟಿದೆ. ಗೋರಿಲ್ಲಾದ ವಯಸ್ಸನ್ನ ಗಮನದಲ್ಲಿಟ್ಟುಕ್ಕೊಂಡು ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಅಲ್ಲದೇ ಗೋರಿಲ್ಲಾಗೆ ನ್ಯುಮೋನಿಯಾ ಹಾಗೂ ಹೃದಯ ಸಂಬಂಧಿ ಕಾಯಿಲೆ ಇರೋದು ತಿಳಿದುಬಂದಿದೆ.
ಕಷಾಯವನ್ನು ಅತಿಯಾಗಿ ಸೇವಿಸಿದರೆ ಈ ಸಮಸ್ಯೆ ಕಾಡುವುದು ಎಚ್ಚರ….!
ಮೃಗಾಲಯದ ಸಿಬ್ಬಂದಿ ಗೋರಿಲ್ಲಾಗೆ ಚಿಕಿತ್ಸೆ ನೀಡುವ ಮುನ್ನ ತಜ್ಞರನ್ನ ಭೇಟಿ ಮಾಡಿದ್ದಾರೆ. ಹಾಗೂ ತಜ್ಞರ ಜೊತೆ ಆಂಟಿಬಯೋಟಿಕ್ಸ್ ಹಾಗೂ ಮೊನೊಕ್ಲೋನಲ್ ಆಂಟಿಬಾಡಿ ಥೆರಪಿಯನ್ನ ಸೋಂಕಿತ ಗೋರಿಲ್ಲಾಗೆ ನೀಡುವ ಬಗ್ಗೆ ಬಗ್ಗೆ ಚರ್ಚೆ ಮಾಡಿದ್ದಾರೆ. ಆದರೆ ಈ ಪ್ರತಿಕಾಯ ಚಿಕಿತ್ಸೆಯನ್ನ ಮಾನವ ಬಳಕೆಗೆ ಅನುಮತಿಸಲಾಗೋದಿಲ್ಲ.
ವಿನ್ಸ್ಟನ್ಗೆ ಚಿಕಿತ್ಸೆ ನೀಡಿದ ಪಶು ವೈದ್ಯಕೀಯ ತಂಡ ಆಂಟಿಬಯೋಟಿಕ್ಸ್ ಥೆರಪಿ ಈ ಚಿಕಿತ್ಸೆ ಮೂಲಕ ಆತ ವೈರಸ್ನಿಂದ ಹೊರಬಂದಿದ್ದಾನೆ ಎಂದು ಅಭಿಪ್ರಾಯಪಟ್ಟಿದ್ದಾರೆ.