ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಬರುವ ಮೊದಲು ಕಂಪ್ಯೂಟರ್ ನಲ್ಲಿ ಮಿಂಚಂಚೆ ಕಳುಹಿಸುತ್ತಿದ್ದ ಕಾಲವನ್ನೊಮ್ಮೆ ನೆನಪಿಸಿಕೊಳ್ಳಿ. ಆಗೆಲ್ಲ ರೆಡಿಫ್, ಯಾಹೂ, ಎಂಎಸ್ಎನ್, ಜಿ ಮೇಲ್ ಯಾವುದೇ ಇದ್ದರೂ ಎಲ್ಲದರ ಲಾಂಛನ ಒಂದೇ ಆಗಿರುತ್ತಿತ್ತು. ಮುಚ್ಚಿದ ಲಕೋಟೆ (ಎನ್ವೆಲೊಪ್) ಹಾಗೆಯೇ ಇರುತ್ತಿದ್ದವು.
ಇತ್ತೀಚೆಗೆ ಎಲ್ಲದರ ಲಾಂಛನ, ವಿನ್ಯಾಸದಲ್ಲಿ ಬದಲಾಗುತ್ತಿದ್ದು, ಜಿ ಮೇಲ್ ಕೂಡ ತನ್ನ ಲಾಂಛನದ ವಿನ್ಯಾಸದಲ್ಲಿ ಬದಲಾವಣೆ ತಂದಿದೆ.
ಬಿಳಿಯ ಲಕೋಟೆಗೆ ಕೆಂಪು ಅಂಚು ಇರುತ್ತಿದ್ದ ಜಿ ಮೇಲ್, ಇದೀಗ ಗೂಗಲ್ ನ ಮ್ಯಾಪ್, ಡ್ರೈವ್ ಸೇರಿದಂತೆ ಇತರೆ ಉತ್ಪನ್ನಗಳ ವರ್ಣವಿನ್ಯಾಸದೊಂದಿಗೆ ಮರು ವಿನ್ಯಾಸಗೊಳಿಸಿದೆ.
ಲಕೋಟೆಯ ಮಾದರಿಯಲ್ಲಿಯೇ ಲಾಂಛನ ಇದೆಯಾದರೂ, ಕೆಂಪು, ಬಿಳಿ, ನೀಲಿ, ಹಳದಿ, ಹಸಿರು ಬಣ್ಣಗಳ ಸಮ್ಮಿಳಿತ ಇರುವ ಎಂ ಮಾದರಿಯಲ್ಲಿದೆ.
ಹೊಸತಾದ್ದರಿಂದ ಗ್ರಾಹಕರು ಇದಕ್ಕೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಜಿ ಮೇಲ್ ತನ್ನತನ ಕಳೆದುಕೊಂಡಿದೆ. ಲಾಂಛನ ಹಾಳಾಗಿದೆ ಎಂದೆಲ್ಲ ಟ್ವೀಟ್ ಮಾಡಿದ್ದಾರೆ.
https://twitter.com/dwr/status/1313530788390998016?ref_src=twsrc%5Etfw%7Ctwcamp%5Etweetembed%7Ctwterm%5E1313530788390998016%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fgoogles-gmail-app-changed-its-iconic-logo-but-nobody-signed-up-for-it-2939539.html
https://twitter.com/jsoltero/status/1313568878966927360?ref_src=twsrc%5Etfw%7Ctwcamp%5Etweetembed%7Ctwterm%5E1313568878966927360%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fgoogles-gmail-app-changed-its-iconic-logo-but-nobody-signed-up-for-it-2939539.html