ಖಾಸಗಿತನದ ಸಂಬಂಧ ತನ್ನ ಕಟ್ಟುಪಾಡುಗಳ ಉಲ್ಲಂಘನೆ ಮಾಡುತ್ತಿದ್ದ ಮೂರು ಆಪ್‌ಗಳನ್ನು ಗೂಗಲ್ ತನ್ನ ಪ್ಲೇಸ್ಟೋರ್‌ನಿಂದ ಕಿತ್ತೊಗೆದಿದೆ. ಅಂತಾರಾಷ್ಟ್ರೀಯ ಡಿಜಿಟಲ್ ಹೊಣೆಗಾರಿಕೆ ಸಮಿತಿ (IDCA) ಈ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಬಳಿಕ ಈ ನಿರ್ಣಯಕ್ಕೆ ಗೂಗಲ್ ಬಂದಿದೆ.
ಪ್ರಿನ್ಸೆಸ್ ಸಲೋನ್, ನಂಬರ್ ಕಲರಿಂಗ್ ಹಾಗೂ ಕ್ಯಾಟ್ಸ್ & ಕಾಸ್‌ಪ್ಲೇ ಹೆಸರಿನ ಈ ಕಿರು ತಂತ್ರಾಂಶಗಳು ಮಕ್ಕಳಿಂದ ಸಂಗ್ರಹ ಮಾಡುತ್ತಿದ್ದ ಡೇಟಾ, ಪ್ಲೇಸ್ಟೋರ್‌ನ ನಿಯಮಾವಳಿಗಳಿಗೆ ವ್ಯತಿರಿಕ್ತವಾಗಿದ್ದವು ಎನ್ನಲಾಗಿದೆ. ಮಕ್ಕಳ ಮುಖಾಂತರ ಮೂರನೇ ಪಾರ್ಟಿಗಳಿಗೆ ಖಾಸಗಿ ಮಾಹಿತಿಯನ್ನು ಲೀಕ್ ಮಾಡುತ್ತಿದ್ದ ಆಪಾದನೆ ಬಲವಾಗಿ ಕೇಳಿಬಂದಿದೆ.
ಮಕ್ಕಳಿಗೆಂದೇ ಹೊರ ತರಲಾಗುವ ಕಿರು ತಂತ್ರಾಂಶಗಳ ಕುರಿತಂತೆ ಗೂಗಲ್ ಹಾಗೂ ಆಪಲ್‌ಗಳು ತಮ್ಮ ಸ್ಟೋರ್‌ಗಳಲ್ಲಿ ಬಹಳ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಹೊಂದಿದ್ದು, ಬಹಳಷ್ಟು ಪ್ರಕರಣಗಳಲ್ಲಿ ಮಕ್ಕಳಿಂದ ಸಂಗ್ರಹಿಸಲ್ಪಟ್ಟ ಮಾಹಿತಿಯನ್ನು ಮೂರನೇ ಪಾರ್ಟಿಗೆ ರವಾನೆಯಾಗದಂತೆ ನೋಡಿಕೊಳ್ಳಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.
ಈ ಹಿಂದೆ ಸಹ ಇದೇ ರೀತಿ ಬಳಕೆದಾರರ ಮಾಹಿತಿಯನ್ನು ಮಿತಿ ಮೀರಿ ಅಕ್ಸೆಸ್ ಮಾಡಲು ನೋಡಿದ ಆಪಾದನೆ ಮೇಲೆ 17 ಕಿರು ತಂತ್ರಾಂಶಗಳಿಗೆ ತನ್ನ ಪ್ಲಾಟ್‌ಫಾರಂಗಳಿಂದ ಕಿಕ್ ಔಟ್ ಮಾಡಿತ್ತು ಗೂಗಲ್.