
ವಿಶ್ವದಾಖಲೆ ಬರೆಯುವುದು ಎಂದರೆ ಹೇಳಿದಷ್ಟು ಸುಲಭವಲ್ಲ. ಅದಕ್ಕೆ ಶ್ರದ್ಧೆ ಹಾಗೂ ತ್ಯಾಗ ಅಗತ್ಯ. ಆದರಲ್ಲೂ ಈತ ಮಾಡಿರುವ ದಾಖಲೆ ಕೇಳಿದರೆ, ಮತ್ತಷ್ಟು ಶ್ರದ್ಧೆ ಅಗತ್ಯವೆಂದು ಅನಿಸದೇ ಇರುವುದಿಲ್ಲ.
ಹೌದು, ಅಮೆರಿಕದ ಜೋಸೆಫ್ ಗ್ರಿಸಮೋರ್ ಎನ್ನುವ ವ್ಯಕ್ತಿ ಬರೋಬ್ಬರಿ 42.5 ಇಂಚಿನ ಕೂದಲನ್ನು ಸ್ಪೈಕ್ ಮಾಡಿದ್ದಾನೆ. ಇಷ್ಟು ಉದ್ದದ ಕೂದಲ ಬೆಳೆಸುವುದು ಸುಲಭದಾಗಿರಲಿಲ್ಲವಂತೆ. 2007 ರಲ್ಲಿ ಈತ ಮಾಡಿದ್ದ ದಾಖಲೆಯನ್ನೇ ಈತ ಮುರಿದಿದ್ದಾನೆ ಎಂದು ಹೇಳಲಾಗಿದೆ.
ಇಷ್ಟು ಉದ್ದದ ಕೂದಲನ್ನು ಇಟ್ಟಕೊಂಡು ಓಡಾಡುವುದು ಸುಲಭವಾಗಿರಲಿಲ್ಲ. ಮನೆಯ ಬಾಗಿಲಿನಲ್ಲಿ ಹೋಗುವುದು, ಮನೆಯಲ್ಲಿರುವ ಸೀಲಿಂಗ್ ಅನ್ನು ಕೂದಲು ತಾಗುತ್ತಿತ್ತಂತೆ. ಇನ್ನು ಇಷ್ಟು ಉದ್ದದ ಕೂದಲನ್ನು ಹೊತ್ತು ಕಾರಿನಲ್ಲಿ ಹೋಗುವುದು ಅಸಾಧ್ಯವಾಗಿತ್ತು. ಆದ್ದರಿಂದ ಜೋಸೆಫ್ ಕಾರಿನಲ್ಲಿ ಹೋಗುವುದನ್ನೇ ಬಿಟ್ಟಿದ್ದನಂತೆ.