NBA ಆಟಗಾರ ರೆಕ್ಸ್ ಚಾಪ್‌ಮನ್ ಶೇರ್ ಮಾಡಿರುವ ವಿಡಿಯೋವೊಂದು ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ನಾಯಿಯೊಂದು ಪೂಲ್ ಗೇಮ್ ಅನ್ನು ಆರಾಮವಾಗಿ ಆಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಸ್ಟಿಕ್‌ನ ಸಹಾಯವಿಲ್ಲದೇ ತನ್ನ ಮುಂಗಾಲಿನಿಂದ ಪೂಲ್‌ನಲ್ಲಿರುವ ಚೆಂಡುಗಳನ್ನು ಈ ಶ್ವಾನ ತಳ್ಳುತ್ತಿರುವುದನ್ನು ನೋಡಬಹುದಾಗಿದೆ. ನಾಯಿಯ ನಿಖರ ಗುರಿಗೆ ಚೆಂಡುಗಳೆಲ್ಲಾ ಪಾಕೆಟ್‌ಗಳ ಒಳಗೆ ಹೋಗಿ ಬೀಳುತ್ತಿವೆ. ಬಿಳಿ ಬಣ್ಣದ ಕ್ಯೂ ಚೆಂಡಿನ ಮೂಲಕ ಇತರ ಚೆಂಡುಗಳಿಗೆ ಪಥ ನಿರ್ದೇಶನ ಮಾಡುತ್ತಿದೆ ಈ ಅದ್ಭುತ ಶ್ವಾನ.
ಇವೆಲ್ಲಕ್ಕಿಂತ ಕ್ಯೂಟ್ ಆಗಿ ಕಾಣುವುದೆಂದರೆ, ಚೆಂಡನ್ನು ಗುರಿಯಿಟ್ಟು ಹೊಡೆದ ಕೂಡಲೇ ಅದು ಹೋಗಿ ಪಾಕೆಟ್‌ನಲ್ಲಿ ಬೀಳುತ್ತದೋ ಎಂದು ಬೆರಗುಗಣ್ಣಿನಿಂದ ನಾಲಿಗೆಯನ್ನೂ ಹೊರಚಾಚಿಕೊಂಡು ನೋಡುವುದು.