ಪಾಕಿಸ್ತಾನದ ನಗರಗಳಲ್ಲಿ ಮಾನ್ಸೂನ್ ಅಬ್ಬರಕ್ಕೆ ರಸ್ತೆಗಳೆಲ್ಲಾ ನೀರು ತುಂಬಿಕೊಂಡು ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗುವುದು ಸಹಜವಾಗಿಬಿಟ್ಟಿದೆ.
ಕರಾಚಿಯಲ್ಲಿ ಭಾರೀ ಮಳೆಯಾದ ಬಳಿಕ ಇಂಥದ್ದೇ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದೇ ವೇಳೆ ನೀರು ತುಂಬಿಕೊಂಡಿದ್ದ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಆರಾಮವಾಗಿ ತೇಲುತ್ತಾ, ಯಾವ ಚಿಂತೆಯೂ ಇಲ್ಲದಂತೆ ಮುಂದೆ ಸಾಗುತ್ತಿರುವ ವಿಡಿಯೋವನ್ನು ಅಲ್ಲಿನ ನಿವಾಸಿಯೊಬ್ಬರು ಮಾಡಿಕೊಂಡು ನೆಟ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಆತ ಧರಿಸಿರುವ ಸಲ್ವಾರ್ನಲ್ಲಿ ಗಾಳಿ ತುಂಬಿಕೊಂಡು, ನೀರಿನಲ್ಲಿ ಆತ ಮುಳುಗದಂತೆ ಎತ್ತಿ ಹಿಡಿದುಕೊಂಡಿರಬಹುದು ಎಂದು ನೆಟ್ಟಿಗರು ತಮ್ಮ ಅನಿಸಿಕೆಯನ್ನು ಕಾಮೆಂಟ್ ವಿಭಾಗದಲ್ಲಿ ಹಾಕಿದ್ದಾರೆ.