ಪ್ರೇಕ್ಷಕರೊಂದಿಗೆ ನೇರ ಪ್ರಸಾರದ ಮೂಲಕ ಕನೆಕ್ಟ್ ಆಗಲೆಂದೇ ಲೈವ್ ಸ್ಟ್ರೀಮಿಂಗ್ ವ್ಯವಸ್ಥೆ ತರಲಾಗಿದೆ. ಯಾವುದೇ ಒಂದು ವಿಷಯದ ಬಗ್ಗೆ ಮೌಲ್ಯಯುತ ಮಾಹಿತಿಯನ್ನು ಹಂಚಿಕೊಳ್ಳಲೆಂದೇ ಲೈವ್ ಸ್ಟ್ರೀಮಿಂಗ್ ಇರೋದು.
ಸಾಮಾಜಿಕ ಜಾಲತಾಣಗಳ ಅನೇಕ ಪ್ಲಾಟ್ಫಾರಂಗಳಲ್ಲಿ ಸಿಗುವ ಈ ಫೀಚರ್ ಅನ್ನು ಬಹಳ ವ್ಲಾಗರ್ಗಳು ತಮ್ಮ ವೀಕ್ಷಕರೊಂದಿಗೆ ಕನೆಕ್ಟ್ ಆಗಲು ಬಳಸುತ್ತಾರೆ.
ವಿದ್ಯುತ್ ಪ್ರವಹಿಸಿ ಅಸ್ವಸ್ಥ: ಚಿಕಿತ್ಸೆ ನೀಡದೆ ಹೊರನಡೆದ ವೈದ್ಯ – ನರಳಿ ನರಳಿ ಪ್ರಾಣಬಿಟ್ಟ ಬಾಲಕ
ಕೇಂದ್ರ ಲಂಡನ್ನ ಬೀದಿಗಳಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದ ಸ್ಟ್ರೀಮರ್ ಶೆರ್ವಿನ್, ತಮ್ಮ ವೀಕ್ಷಕರಿಗೆ ಪ್ರಶ್ನೆಗಳನ್ನು ಕೇಳಲೆಂದೇ ಒಂದು ಲೈವ್ ಸೆಶನ್ ಇಟ್ಟುಕೊಂಡಿದ್ದರು. ಈ ಸಂದರ್ಭದಲ್ಲಿ, ತಾವಿದ್ದ ಜಾಗದ ಪಕ್ಕದಲ್ಲೇ ಜಗಳವೊಂದು ನಡೆಯುತ್ತಿರುವುದನ್ನು ಕಂಡ ಶೆರ್ವಿನ್, ಅಲ್ಲಿ ಬೈಸಿಕಲ್ ಮೇಲೆ ಬರುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ದಾಳಿಯಾಗುತ್ತಿರುವುದನ್ನು ನೋಡಿದ್ದಾರೆ.
“ಅವನನ್ನು ಬಿಟ್ಟುಬಿಡಿ, ಅವನನ್ನು ಬಿಟ್ಟುಬಿಡಿ” ಎಂದುಕೊಂಡು ಜಗಳ ನಡೆಯುತ್ತಿದ್ದ ಸ್ಥಳದತ್ತ ಧಾವಿಸುವ ಶೆರ್ವಿನ್, ಬೈಸಿಕಲ್ನಿಂದ ಬಿದ್ದ ವ್ಯಕ್ತಿಯ ನೆರವಿಗೆ ಬರುತ್ತಾರೆ. ಆಗ ಶೆರ್ವಿನ್ ಪೊಲೀಸರನ್ನು ಕರೆಯಿಸುವುದಾಗಿ ಹೇಳಿದಾಗ, ಆತನ ಬಳಿ ಇರುವ ಕ್ಯಾಮೆರಾದತ್ತ ನೋಡುವ ದಾಳಿಕೋರರು ಆ ಜಾಗದಿಂದ ಪರಾರಿಯಾಗುತ್ತಾರೆ.
https://www.youtube.com/watch?v=65bYve4acus&t=1s