ತಾನು ಪ್ರೀತಿಸುವಾಕೆಗೆ ವಿಭಿನ್ನವಾಗಿ ಪ್ರೇಮ ನಿವೇದನೆ ಮಾಡಬೇಕು ಎಂಬ ಶೋಕಿ ಹಲವರಲ್ಲಿರುತ್ತದೆ. ಅಂಥ ಕಲ್ಪನೆ ಇಟ್ಟುಕೊಂಡವರೆಲ್ಲ ಈ ಸ್ಟೋರಿ ಹಾಗೂ ವಿಡಿಯೋ ಒಮ್ಮೆ ನೋಡೋದು ಒಳ್ಳೆಯದು ಅನ್ಸುತ್ತೆ.
ಥೆಯೊ ಶಾಂಟೊನಾಸ್ ಎಂಬ ಟ್ವಿಟರ್ ಖಾತೆಯಲ್ಲಿ ಅಪ್ ಲೋಡ್ ಆಗಿರುವ ವಿಡಿಯೋ ಭರ್ಜರಿ ವೈರಲ್ ಆಗಿದೆ. 1.44 ಲಕ್ಷ ಜನ ವಿಡಿಯೋ ವೀಕ್ಷಿಸಿದ್ದು, 1.3 ಕೆ ಜನ ಲೈಕ್ ಮಾಡಿದ್ದಾರೆ. 500 ಕ್ಕೂ ಅಧಿಕ ಜನ ರಿ ಟ್ವೀಟ್ ಮಾಡಿದ್ದಾರೆ.
ವಿಡಿಯೋದಲ್ಲಿ ಮಹಿಳೆಯೊಬ್ಬಳು ಬೋಟ್ ಒಂದರಲ್ಲಿ ಕುಳಿತಿರುತ್ತಾಳೆ. ಆಕೆಯ ಪ್ರಿಯತಮ ಪಕ್ಕದಲ್ಲಿರುವ ಇನ್ನೊಂದು ಬೋಟ್ ತುದಿಯಲ್ಲಿ ನಿಂತು ಆಕೆಯ ಬಳಿ ಮದುವೆ ಪ್ರಸ್ತಾಪ ಮಾಡುತ್ತಾನೆ. ಖುಷಿಯಾದ ಆಕೆ ಎದ್ದು ಆತನಿಗೆ ಕಿಸ್ ಮಾಡಲು ಮುಂದಾಗುತ್ತಾಳೆ. ಆದರೆ, ಆಯ ತಪ್ಪಿ ಬಿದ್ದು ಬಿಡುತ್ತಾಳೆ. ಆಕೆ ಬಿದ್ದ ಏಟಿಗೆ ಆಕೆಯ ಕಾಲು ಬೋಟ್ ತುದಿಯಲ್ಲಿದ್ದ ಪ್ರಿಯತಮನಿಗೆ ತಾಗಿ ಆತನೂ ನೀರಿನಲ್ಲಿ ಬೀಳುತ್ತಾನೆ. ಮುಂದೇನಾಯ್ತೊ ಗೊತ್ತಿಲ್ಲ. ಏಕೆಂದರೆ, ವಿಡಿಯೋ ಅಷ್ಟಕ್ಕೆ ಮುಕ್ತಾಯವಾಗಿದೆ.
https://twitter.com/TheoShantonas/status/1310241716096643078?ref_src=twsrc%5Etfw%7Ctwcamp%5Etweetembed%7Ctwterm%5E1310241716096643078%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fgone-viral-man-goes-to-propose-to-his-girlfriend-on-a-boat-gets-kicked-in-the-face-watch%2F659297