
ತುರ್ಕಮೇನಿಸ್ತಾನದ ಅಧ್ಯಕ್ಷ ಗರ್ಬಾಂಗುಲಿ ಬರ್ಡಿಮುಖಾಮೆಡೋವ್ ತಮ್ಮ ನೆಚ್ಚಿನ ತಳಿಯಾದ ಅಲಬೈ ಜಾತಿಯ ಶ್ವಾನದ ಮೇಲೆ ಪ್ರೀತಿ ಹಿನ್ನೆಲೆ ಈ ಪ್ರತಿಮೆ ನಿರ್ಮಿಸಿದ್ದಾರೆ.
ಪ್ರತಿಮೆ ಅನಾವರಣದ ವಿಡಿಯೋವನ್ನ ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾಗಿದೆ. ಸಮಾರಂಭದಲ್ಲಿ ತುರ್ಕಮೇನಿಸ್ತಾನದ ಅಧ್ಯಕ್ಷ ಕೂಡ ಉಪಸ್ಥಿತರಿರೋದನ್ನ ಕಾಣಬಹುದಾಗಿದೆ. ನಾಯಿಯ ಪ್ರತಿಮೆಯ ಕೆಳಗೆ ಎಲ್ಇಡಿ ಪರದೆ ಅಳವಡಿಸಲಾಗಿದ್ದು ಇದರಲ್ಲಿ ಅಲಬೈ ಶ್ವಾನದ ದೃಶ್ಯಗಳನ್ನ ಕಾಣಬಹುದಾಗಿದೆ.
ಶ್ವಾನಗಳ ಕಟ್ಟಾ ಪ್ರೇಮಿ ಹಾಗೂ ಕುದುರೆ ಸವಾರಿ ಪ್ರಿಯರಾಗಿರುವ ಗರ್ಬಾಂಗುಲಿ ಈ ನಾಯಿ ತಳಿಯ ಬಗ್ಗೆ ಪುಸ್ತಕವನ್ನೂ ಬರೆದಿದ್ದಾರೆ. ಮಧ್ಯ ಏಷ್ಯಾದ ಈ ನಾಯಿ ಕುರಿ ಹಾಗೂ ಮೇಕೆ ಹಿಂಡುಗಳನ್ನ ಕಾಪಾಡುವಲ್ಲಿ ಹೆಸರುವಾಸಿ. ರಷ್ಯಾದಲ್ಲೂ ಇದು ಜನಪ್ರಿಯ ಶ್ವಾನಗಳ ಪಟ್ಟಿಯಲ್ಲಿ ಒಂದಾಗಿದೆ.