ಫ್ಲಾರಿಡಾದ ಮಾಜಿದ್ ’ಮ್ಯಾಜಿಕ್’ ಇಸ್ಮಾಯಿಲಿ ಹೆಸರಿನ ಈ ವ್ಯಕ್ತಿ ತನ್ನ ಮನೆಯನ್ನೇ ಪಕ್ಷಿಧಾಮವನ್ನಾಗಿ ಮಾಡಿಕೊಂಡು, ಅದರಲ್ಲಿ 200ಕ್ಕೂ ಹೆಚ್ಚು ತಳಿಯ ಪಕ್ಷಿಗಳೊಂದಿಗೆ ವಾಸಿಸುತ್ತಿದ್ದಾರೆ.
ಇಲ್ಲಿನ ಟಾಂಪಾ ಎಂಬ ಊರಿನಲ್ಲಿ ಝಾಕ್ಸಿ ಗಿಳಿಗಳ ಧಾಮವೊಂದನ್ನು ಮಾಜಿದ್ ನಡೆಸಿಕೊಂಡು ಹೋಗುತ್ತಿದ್ದಾರೆ. ಇದಕ್ಕೆಂದೇ ಸಿಬ್ಬಂದಿಯನ್ನೂ ಇಟ್ಟುಕೊಂಡಿದ್ದಾರೆ ಮಾಜಿದ್.
ಆದರೆ ಅವರಿಗೊಂದು ವಿಚಿತ್ರ ಸಮಸ್ಯೆ ಎದುರಾಗಿದೆ. ತಾವಿರುವ ಸುತ್ತಲಿನ ಎಲ್ಲ ಕಡೆಗಳಲ್ಲೂ ಇತರರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಮಾಜಿದ್ ತಮ್ಮ ಮನೆಯಿಂದ ಹೊರ ಬರಲು ಇರುವ ಏಕೈಕ ಜಾಗವೆಂದರೆ, ಅವರ ಪಕ್ಕದಲ್ಲಿರುವ ಮತ್ತೊಬ್ಬರ ಮನೆಯ ಮುಖಾಂತರ. ಇತ್ತೀಚೆಗೆ ಆ ವ್ಯಕ್ತಿಯು ತನ್ನ ಮನೆಯ ಗೇಟ್ಗಳನ್ನು ಮುಚ್ಚಿಕೊಂಡಿದ್ದು, ಮಾಜಿದ್ರನ್ನು ಅವರ ಮನೆಯಲ್ಲಿಯೇ ಕೂಡಿ ಹಾಕಿದ್ದಾರೆ. ಅದೃಷ್ಟವಶಾತ್ ತಮ್ಮ ಮನೆಯಂಗಳಲ್ಲಿ ಬೆಳೆಯುವ ಗಿಡಗಳಲ್ಲಿ ಸಿಗುವ ಬಾಳೆಹಣ್ಣು ಹಾಗೂ ಬಿದಿರನ್ನು ತಿಂದುಕೊಂಡು ಕಾಲ ಕಳೆಯುತ್ತಿದ್ದಾರಂತೆ ಮಾಜಿದ್.