ಫೋಟೋ ಬಾಂಬಿಂಗ್ ಚೇಷ್ಟೆಯ ಮತ್ತೊಂದು ನಿದರ್ಶನವೊಂದು ಇಂಟರ್ನೆಟ್ನಲ್ಲಿ ವೈರಲ್ ಆಗಿದೆ. ಬಿಬಿಸಿ ವರದಿಗಾರ ಜೋ ಟೈಡಿ ಅವರು ಜರ್ಮನಿಯಲ್ಲಿ ವರದಿಗಾರಿಕೆ ಮಾಡುತ್ತಿದ್ದ ವೇಳೆ ಇಬ್ಬರು ಹುಡುಗರು ತುಂಟತನದ ಕೆಲಸ ಮಾಡಿದ್ದಾರೆ.
ವರದಿಗಾರಿಕೆಯ ವಿಡಿಯೋದಲ್ಲಿ ಟೈಡಿ ಮಾತನಾಡುತ್ತಿದ್ದ ವೇಳೆ, ಅವರ ಹಿಂದೆ ಇಬ್ಬರು ತುಂಟ ಹುಡುಗರು ಹಿಮ್ಮುಖವಾಗಿ ನಡೆದುಕೊಂಡು ಹೋಗುತ್ತಾ ಒಂದು ಬ್ಲೂಪರ್ ಸೀನ್ ಅನ್ನು ಸೃಷ್ಟಿಸಿದ್ದಾರೆ. ಈ ಚೇಷ್ಟೆಯ ವಿಡಿಯೋ ತುಣುಕನ್ನು ಟೈಡಿ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಹುಡುಗರ ತುಂಟಾಟದಿಂದ ತಮಗೇನೂ ಬೇಸರವಾಗಿಲ್ಲ ಎಂದಿದ್ದಾರೆ.
https://twitter.com/GossiTheDog/status/1304401534583738369?ref_src=twsrc%5Etfw%7Ctwcamp%5Etweetembed%7Ctwterm%5E1304401534583738369%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fgod-tier-trolling-two-kids-caught-on-camera-photobombing-a-reporter-viral-clip-leaves-netizens-in-splits%2F651627