
ಸಾಮಾನ್ಯವಾಗಿ ಮೇಕೆ ಎಂಬ ಹೆಸರು ಕೇಳಿದ ಕೂಡಲೇ, ಹುಲ್ಲುಗಾವಲಿನಲ್ಲಿ ಆಡುಗಳು ಮೇಯುತ್ತಿರುವ ದೃಶ್ಯ ನಮ್ಮ ಕಣ್ಣುಗಳ ಮುಂದೆ ನಿಲ್ಲುತ್ತದೆ. ಆದರೆ ಸಮುದ್ರದಲ್ಲಿ ಸರ್ಫಿಂಗ್ ಮಾಡುವುದನ್ನು ಮೇಕೆಗಳು ಎಂಜಾಯ್ ಮಾಡುವುದನ್ನು ಎಷ್ಟು ಮಂದಿ ನೋಡಿದ್ದೇವೆ…?
ಕ್ಯಾಲಿಫೋರ್ನಿಯಾದಲ್ಲಿ ಈ ಘಟನೆ ಜರುಗಿದ್ದು, ಮೇಕೆಯೊಂದಿಗೆ ಸರ್ಫಿಂಗ್ ಮಾಡುವ ಆಯ್ಕೆಯನ್ನು ತಮ್ಮ ’ದಿ ಸರ್ಫಿಂಗ್ ಗೋಟ್ಸ್’ ಸಂಸ್ಥೆಯ ಮೂಲಕ ಡಾನಾ ಮ್ಯಾಕ್‌ಗ್ರೆಗರ್ ಕೊಡಮಾಡುತ್ತಿದ್ದಾರೆ.
ʼಪ್ರೇಮಿಗಳ ದಿನʼದಂದು ವಿಶಿಷ್ಟ ಪ್ರವಾಸ ಆಯೋಜನೆ
ಸರ್ಫಿಂಗ್ ಮಾಡುವ ವೇಳೆ ತಮ್ಮೊಂದಿಗೆ ಮೇಕೆಯನ್ನು ಕೊಂಡೊಯ್ಯುವ ಆಯ್ಕೆಯನ್ನು ತಮ್ಮ ಪ್ಯಾಕೇಜ್‌ಗಳ ಮೂಲಕ ಕೊಡಮಾಡುತ್ತಿದ್ದಾರೆ ಮ್ಯಾಕ್‌ಗ್ರೆಗರ್.
ಜನರ ಬದುಕುಗಳಲ್ಲಿ ಹೊಸ ಭರವಸೆಯನ್ನು ಮೂಡಿಸುವ ತಮ್ಮ ಪ್ರಯತ್ನ ಇದಾಗಿದೆ ಎಂದು ಮ್ಯಾಕ್‌ಗ್ರೆಗರ್ ಇದೇ ವೇಳೆ ತಿಳಿಸಿದ್ದಾರೆ.