ಒಂದಿಷ್ಟು ಮಂದಿಗೆ ವಿಶೇಷ ವ್ಯಕ್ತಿಗಳ ವಸ್ತುಗಳನ್ನು ಹರಾಜಿನಲ್ಲಿ ಕೊಂಡುಕೊಳ್ಳೋ ಹವ್ಯಾಸ ಇದ್ದೇ ಇರುತ್ತೆ. ಇದಕ್ಕಾಗಿಯೇ ಅನೇಕ ಮಂದಿ ಕಾಯ್ತಾ ಇರ್ತಾರೆ. ಹೀಗೆ ವ್ಯಕ್ತಿಯೊಬ್ಬರು ಗಾಂಧೀಜಿ ಅವರ ಕನ್ನಡಕ ಒಂದನ್ನು ಹರಾಜಿನಲ್ಲಿ ದೊಡ್ಡ ಮೊತ್ತದ ಹಣ ನೀಡಿ ಕೊಂಡುಕೊಂಡಿದ್ದಾರೆ.
ಹೌದು, 1920ರಲ್ಲಿ ದಕ್ಷಿಣ ಆಫ್ರಿಕಾದಲ್ಲಿದ್ದಾಗ ಈ ಕನ್ನಡಕವನ್ನು ಒಬ್ಬರಿಗೆ ಗಿಫ್ಟಾಗಿ ನೀಡಿದ್ದರಂತೆ. ಅಂದರೆ ಈಗಿನ ಈ ಕನ್ನಡಕದ ಮಾಲೀಕರ ಚಿಕ್ಕಪ್ಪ ಆತ ಎಂದು ಹೇಳಲಾಗುತ್ತಿದೆ. ಇವರಿಂದ ಅನುವಂಶೀಯವಾಗಿಯೇ ಬಂದಿದೆ. ಇನ್ನು ಈ ಕನ್ನಡಕ ಹತ್ತರಿಂದ ಹದಿನೈದು ಲಕ್ಷ ರೂಪಾಯಿಗಳಿಗೆ ಹರಾಜಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ನಿಜಕ್ಕೂ ಈಗ ಮಾರಾಟವಾಗಿರುವ ಇದರ ಬೆಲೆಗೆ ಎಲ್ಲರೂ ಬೆರಗಾಗಿದ್ದಾರೆ.
ಹೌದು, ಹರಾಜಿನಲ್ಲಿ ಇದನ್ನು ಬರೋಬ್ಬರಿ 2 ಕೋಟಿ 60 ಲಕ್ಷ ರೂಪಾಯಿಗೆ ವ್ಯಕ್ತಿಯೊಬ್ಬರು ಖರೀದಿ ಮಾಡಿದ್ದಾರೆ. ಇದರ ಮೂಲ ಬೆಲೆಯ 26 ಪಟ್ಟು ಹೆಚ್ಚಿನ ಬೆಲೆ ಇದಾಗಿದೆಯಂತೆ. ಗಾಂಧೀಜಿಯವರ ಈ ಕನ್ನಡಕ ಇಷ್ಟು ಬೆಲೆಗೆ ಖರೀದಿಯಾಗುತ್ತೆ ಅಂತ ಊಹೆ ಕೂಡ ಇರಲಿಲ್ಲವಂತೆ.