
ಸಂಗಾತಿ ಮೋಸ ಮಾಡ್ತಿರುವ ಸಂಗತಿ ಗೊತ್ತಾದ್ರೆ ಕೋಪ ಬರುವುದು ಸಹಜ. ಕೋಪಕ್ಕೆ ಬುದ್ದಿಕೊಟ್ಟು ಅನೇಕರು ಸಂಗಾತಿ ವಿರುದ್ಧ ಸೇಡು ತೀರಿಸಿಕೊಳ್ತಾರೆ. ತೈವಾನ್ ನಲ್ಲಿ ಪತಿಯಿಂದ ಮೋಸ ಹೋದ ಪತ್ನಿಯೊಬ್ಬಳು ಮಾಡಿದ ಕೆಲಸ ದಂಗಾಗಿಸುವಂತಿದೆ.
52 ವರ್ಷದ ಹುವಾಂಗ್ ಎಂಬಾತ ಫುಂಗ್ ಜೊತೆ ವಾಸವಾಗಿದ್ದಾನೆ. ದಂಪತಿಗೆ ಮೂವರು ಮಕ್ಕಳಿವೆ. ಈ ಮಧ್ಯೆ ಹುವಾಂಗ್ ಮೋಸ ಮಾಡ್ತಿದ್ದಾನೆ ಎಂಬುದು ಫುಂಗ್ ಗೆ ಗೊತ್ತಾಗಿದೆ. ಹುವಾಂಗ್, ಬೇರೆ ಹುಡುಗಿ ಜೊತೆ ಸಂಬಂಧ ಹೊಂದಿದ್ದಾನೆ ಎಂಬ ವಿಷ್ಯ ಗೊತ್ತಾಗ್ತಿದ್ದಂತೆ ಕೋಪಗೊಂಡ ಫುಂಗ್, ರಾತ್ರಿ ಮಲಗಿದ್ದ ಹುವಾಂಗ್ ಮೇಲೆ ಸೇಡು ತೀರಿಸಿಕೊಂಡಿದ್ದಾಳೆ. ಫುಂಗ್ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ. ಇಷ್ಟೇ ಅಲ್ಲ ಕತ್ತರಿಸಿದ ಅಂಗವನ್ನು ಶೌಚಾಲಯಕ್ಕೆ ಹಾಕಿದ ಫುಂಗ್, ಪೊಲೀಸ್ ಠಾಣೆಗೆ ಬಂದಿದ್ದಾಳೆ.
ಪೊಲೀಸರಿಗೆ ಶರಣಾದ ಫುಂಗ್, ಎಲ್ಲ ವಿಷ್ಯವನ್ನು ಪೊಲೀಸರಿಗೆ ಹೇಳಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹುವಾಂಗ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಕತ್ತರಿಸಿ ಶೌಚಾಲಯಕ್ಕೆ ಹಾಕಿದ್ದ ಖಾಸಗಿ ಅಂಗದ ಭಾಗ ಸಿಕ್ಕಿಲ್ಲ. ಪೊಲೀಸರು ಫುಂಗ್ ಳನ್ನು ವಶಕ್ಕೆ ಪಡೆದಿದ್ದಾರೆ.