alex Certify ಪರಸ್ಪರ ಸರ್ಪ್ರೈಸ್ ಕೊಡಲು ಹೋಗಿ ಬೇಸ್ತುಬಿದ್ದ ಪ್ರೇಮಿಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರಸ್ಪರ ಸರ್ಪ್ರೈಸ್ ಕೊಡಲು ಹೋಗಿ ಬೇಸ್ತುಬಿದ್ದ ಪ್ರೇಮಿಗಳು…!

ಪ್ರೇಮಿಗಳು ತಮ್ಮ ಪ್ರೇಮವನ್ನ ನಿವೇದನೆ ಮಾಡಿಕೊಂಡ ದಿನವನ್ನ ವಿಶೇಷವಾಗಿ ಆಚರಿಸೋದೇನು ಹೊಸ ವಿಚಾರವಲ್ಲ.ಈ ದಿನ ಒಬ್ಬರಿಗೊಬ್ಬರು ಸಪ್ರೈಸ್​ ಕೋಡೋದೂ ಇದೆ. ಆದರೆ ಇದೇ ಸಪ್ರೈಸ್​ ಒಮ್ಮೊಮ್ಮೆ ನಮಗೆ ಉಲ್ಟಾ ಹೊಡೆಯುತ್ತೆ ಅನ್ನೋಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಈ ಜೋಡಿಯ ಕತೆಯೇ ಸಾಕ್ಷಿ.

ಸಾಲ್ಮಾ ಎಂಬ ಮಹಿಳೆ ತಮ್ಮ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ದಿನ ನಡೆದ ಕತೆಯನ್ನ ವಿವರಿಸಿದ್ದು ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಸಲ್ಮಾ ತನ್ನ ಬಾಯ್​ಫ್ರೆಂಡ್​ಗೆ ಸಪ್ರೈಸ್​ ನೀಡಬೇಕೆಂದು ಬಯಸಿದ್ದಳು.

ಹೀಗಾಗಿ ತನ್ನ ಪ್ರಿಯತಮ ವಾಸವಿದ್ದ ಸ್ಕಾಟ್ಲೆಂಡ್​ನ ಎಡಿಂಗ್​ಬರ್ಗ್​ಗೆ ತೆರಳಿದ್ದಾಳೆ. ಆದರೆ ವಿಚಿತ್ರ ಅಂದ್ರೆ ಆತ ಕೂಡ ಆಕೆಗೆ ಸಪ್ರೈಸ್​ ಕೊಡಬೇಕೆಂದು ಆಕೆ ವಾಸವಿದ್ದ ಪ್ಯಾರಿಸ್​ಗೆ ಹಾರಿದ್ದ. ಆಕೆ ಕೂಡಲೇ ವಾಪಸ್ಸಾಗುವಂತೆ ಹೇಳಿದ್ದಾಳೆ.

ಆದರೆ ಅದು ಸಾಧ್ಯವಾಗಲಿಲ್ಲ. 12 ಗಂಟೆ ಅವಧಿ ಒಳಗಾಗಿ ಆತನಿಗೆ ಒಂದೇ ಒಂದು ವಿಮಾನ ಸಿಕ್ಕಿಲ್ಲ. ಹೀಗಾಗಿ ಆತ ಫೇಸ್​ಬುಕ್​ನಲ್ಲಿ ಪರಿಚಯಸ್ಥರು ಯಾರಾದರೂ ಪ್ಯಾರೀಸ್​ನಲ್ಲಿದ್ದರೆ ನನಗೆ ಟೈಮ್​ ಪಾಸ್​ ಮಾಡೋಕೆ ನೆರವಾಗಿ ಎಂದು ಕೇಳಿಕೊಂಡಿದ್ದಾನೆ.

ಸಾಲ್ಮಾ ತನ್ನ ಬಾಯ್​ಫ್ರೆಂಡ್​​ ಫೇಸ್​ಬುಕ್​ ಪೋಸ್ಟ್​ನ ಫೋಟೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾಳೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...