ತಿಮಿಂಗಲಗಳ ಪೈಕಿ ಗಂಡುಗಳಿಗಿಂತ ಹೆಣ್ಣುಗಳು ಬೇಗ ಬೆಳೆಯುತ್ತವೆ ಎಂದು ಅಧ್ಯಯನವೊಂದು ತಿಳಿಸಿದೆ. ಭೂಮಿಯ ಮೇಲಿನ ಅತಿ ದೊಡ್ಡ ಮೀನಿನ ಕುರಿತಂತೆ ಹೀಗೊಂದು ಇಂಟರೆಸ್ಟಿಂಗ್ ಮಾಹಿತಿಯೊಂದು ತಿಲಳಿದುಬಂದಿದೆ.
ಆಸ್ಟ್ರೇಲಿಯಾದ ಪಶ್ಚಿಮ ಕರಾವಳಿಯಲ್ಲಿ 10 ವರ್ಷಗಳ ಅವಧಿಗೆ 54 ತಿಮಿಂಗಿಲಗಳ ಬೆಳವಣಿಗೆಯನ್ನು ಗಮನಿಸಿದ ಸಂಶೋಧಕರು ಈ ವಿಷಯವನ್ನು ಕಂಡುಕೊಂಡಿದ್ದಾರೆ.
ಇದೇ ವೇಳೆ ತಿಮಿಂಗಿಲ ಶಾರ್ಕ್ಗಳ ಪೈಕಿ ಹೆಣ್ಣುಗಳಿಗಿಂತ ಗಂಡುಗಳು ಸ್ವಲ್ಪ ಹೆಚ್ಚು ವೇಗವಾಗಿ ಬೆಳೆಯುವುದು ಕಂಡುಬಂದಿದೆ. ಈ ಜೀವಿಗಳು ತಮ್ಮ ಬಾಲ್ಯಾವಸ್ಥೆಯಲ್ಲಿ ಪ್ರತಿ ವರ್ಷ ಸರಾಸರಿ 8-12 ಇಂಚುಗಳಷ್ಟು ಬೆಳೆಯುತ್ತವೆ. 30 ವರ್ಷ ವಯಸ್ಸಾಗುವಷ್ಟರಲ್ಲಿ ಹೆಣ್ಣು ತಿಮಿಂಗಿಲ ಶಾರ್ಕ್ಗಳು ಸರಾಸರಿ 26 ಅಡಿ (8ಮೀಟರ್) ಉದ್ದ ಬೆಳೆಯುತ್ತವೆ. ಈ ಜೀವಿಗಳು 100-150 ವರ್ಷ ಬದುಕುತ್ತವಂತೆ. ಸಾಮಾನ್ಯವಾಗಿ ಹೆಣ್ಣು ತಿಮಿಂಗಿಲ ಒಮ್ಮೆಗೆ 300 ಮರಿಗಳಿಗೆ ಜನ್ಮ ನೀಡುತ್ತವೆ.