alex Certify ನೃತ್ಯ ಮಾಡುತ್ತಲೇ ನಿದ್ದೆ ಹೋದ ಪುಟ್ಟ ಬಾಲಕಿ: ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೃತ್ಯ ಮಾಡುತ್ತಲೇ ನಿದ್ದೆ ಹೋದ ಪುಟ್ಟ ಬಾಲಕಿ: ವೈರಲ್​ ಆಯ್ತು ವಿಡಿಯೋ

ಪುಟಾಣಿ ಬಾಲಕಿಯೊಬ್ಬಳು ವೇದಿಕೆಯಲ್ಲಿ ನೃತ್ಯ ಪ್ರದರ್ಶನ ಮಾಡುತ್ತಿರುವ ವೇಳೆಯಲ್ಲಿಯೇ ನಿದ್ದೆಗೆ ಜಾರಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಈ ಘಟನೆ ಪಶ್ಚಿಮ ಚೀನಾದ ವೆನ್​ಜಾವು ಎಂಬ ನಗರದಲ್ಲಿ ನಡೆದಿದೆ.

ವಿಡಿಯೋದಲ್ಲಿ 5 ವರ್ಷದ ಬಾಲಕಿ ಕಣ್ಣನ್ನ ಮುಚ್ಚಿಕೊಂಡೇ ಇನ್ನೊಬ್ಬ ಬಾಲಕಿಯ ಪಕ್ಕದಲ್ಲಿ ಕುಳಿತಿರೋದನ್ನ ಕಾಣಬಹುದಾಗಿದೆ. ಆಕೆಯ ಸ್ನೇಹಿತೆ ಈ ಬಾಲಕಿಯನ್ನ ಎಚ್ಚರಿಸಲು ಪ್ರಯತ್ನಿಸಿದರೂ ಸಹ ಆಕೆ ಮಾತ್ರ ವೇದಿಕೆಯ ಮೇಲೆಯೇ ತೂಕಡಿಸುತ್ತಿದ್ದಳು.

ಆಕೆಯ ತಾಯಿ ಈ ಬಗ್ಗೆ ಮಾತನಾಡಿದ್ದು ಬಾಲಕಿ ಊಟವಾದ ಬಳಿಕ ನಿದ್ದೆ ಮಾಡುವ ಅಭ್ಯಾಸ ಹೊಂದಿದ್ದಳು. ಆದರೆ ಆಕೆಯ ನೃತ್ಯ ಪ್ರದರ್ಶನ ಇದ್ದಿದ್ದರಿಂದ ಆಕೆಗೆ ಊಟದ ಬಳಿಕ ಮಲಗಲು ಆಗಿರಲಿಲ್ಲ. ಹೀಗಾಗಿ ಸಿಕ್ಕಾಪಟ್ಟೆ ಸುಸ್ತಾಗಿದ್ದ ಬಾಲಕಿ ವೇದಿಕೆಯ ಮೇಲೆ ತೂಕಡಿಸಿದ್ದಾಳೆ ಎಂದು ಹೇಳಿದ್ರು.

ಈ ವಿಡಿಯೋ ಯುಟ್ಯೂಬ್​ನಲ್ಲಿ 3.2 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಕಮೆಂಟ್​ನಲ್ಲಿ ನೆಟ್ಟಿಗರು, ನಿದ್ರೆ ಬರ್ತಿದ್ದರೂ ಸಹ ತಾನು ಕುಳಿತಿದ್ದ ಭಂಗಿಯನ್ನ ಯಾವುದೇ ಬದಲಾವಣೆ ಮಾಡದ ಬಾಲಕಿಯನ್ನ ಕಂಡು ಆಶ್ಚರ್ಯ ಹೊರಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...