ಮದ್ಯದ ಬಾಟಲಿಯೊಂದಕ್ಕೆ ಪಾಕಿಸ್ತಾನದ ನಿರ್ಮಾತೃ ಬ್ಯಾರಿಸ್ಟರ್ ಮೊಹಮದ್ ಅಲಿ ಜಿನ್ನಾ ಎಂದು ಹೆಸರಿಟ್ಟಿರುವ ಫೋಟೋವೊಂದು ಟ್ವಿಟರ್ ನಲ್ಲಿ ವೈರಲ್ ಆಗಿದೆ.
ಇದು ನಿಜವೇ ಎಂಬುದು ಇನ್ನೂ ಖಚಿತವಾಗಿಲ್ಲ. ಜಿನ್ನಾ ಅವರ ನೆನಪಿಗಾಗಿ ಎಂದು ಬಾಟಲಿ ಮೇಲೆ ಬರೆಯಲಾಗಿದೆ. ಮಾತ್ರವಲ್ಲ. ಅವರು ಪಾಕಿಸ್ತಾನ ದೇಶ ನಿರ್ಮಾಣಕ್ಕೆ ಹೇಗೆ ಕಾರಣರಾದರು ಎಂದು ಅದರಲ್ಲಿ ವಿವರಿಸಲಾಗಿದೆ.
ಜಿನ್ನಾ ಅವರಿಗೆ ಪಾಕಿಸ್ತಾನ ನಿರ್ಮಾಣದ ಯೋಜನೆ ಹುಟ್ಟಿದ್ದು ಹೇಗೆ, 1947 ರಲ್ಲಿ ಪಾಕಿಸ್ತಾನ ಹೇಗೆ ನಿರ್ಮಾಣವಾಯಿತು ಮತ್ತು ದೇಶ ಹೇಗೆ ಸರ್ವಾಧಿಕಾರಿಯ ಕೈವಶವಾಯಿತು ಎಂದು ಬಾಟಲ್ ಮೇಲೆಯೇ ಬರೆಯಲಾಗಿದೆ. ಅಲ್ಲದೆ ಪಾಕಿಸ್ತಾನ ದೇಶದ ಪ್ರಧಾನಿಯಿಂದ ಮಿಲಿಟರಿ ಅಧಿಕಾರಕ್ಕೆ ಹೇಗೆ ಒಳಪಟ್ಟಿತು ಎಂದು ವಿವರಿಸಲಾಗಿದೆ.
1977 ರಲ್ಲಿ ಪಾಕಿಸ್ತಾನದ ಪ್ರಧಾನಿ ಜುಲ್ಫಿಕರ್ ಅಲಿ ಬುಟ್ಟೊ ಅವರಿಂದ ಜನರಲ್ ಮೊಹಮದ್ ಜಿಯಾ – ಉಲ್ – ಹಕ್ ಅಧಿಕಾರವನ್ನು ಕಿತ್ತುಕೊಂಡಿದ್ದರು.
https://twitter.com/OmerSolehri/status/1333422803866030080?ref_src=twsrc%5Etfw%7Ctwcamp%5Etweetembed%7Ctwterm%5E1333422803866030080%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fgin-and-jinnah-photos-of-alcoholic-drink-ginnah-named-after-pakistan-founder-go-viral-3137477.html