
ಆಮೆಗಳು ನಿಧಾನಗತಿಯ ಪ್ರಾಣಿಗಳಾದರೂ ಸಹ ಅವುಗಳಲ್ಲೂ ಬಹಳ ಸಾಹಸ ಪ್ರವೃತ್ತಿ ಇದೆ. ಕೆಲವೊಮ್ಮೆ ವಿಪರೀತ ಕುತೂಹಲದಿಂದ ಆಮೆಗಳು ಫಜೀತಿಯ ಪರಿಸ್ಥಿತಿಗಳನ್ನು ಎದುರಿಸಬೇಕಾಗಿ ಬರುತ್ತದೆ.
ಮಲೇಷ್ಯಾದ ಮೆಲಾಕಾದಲ್ಲಿನ ಸಫಾರಿಯಲ್ಲಿರುವ ಆಮೆಯೊಂದಕ್ಕೆ ಇಂಥದ್ದೇ ಅನುಭವವಾಗಿದೆ. ಕಳೆದ ವಾರ ಆಮೆಯೊಂದು ತನ್ನ ಜಾಗವನ್ನೆಲ್ಲಾ ಅಲೆದಾಡಲು ಮುಂದಾಗಿ ಗೋಡೆಯೊಂದನ್ನು ಏರಿದೆ. ಹುಮ್ಮಸ್ಸಿನಲ್ಲಿ ಗೋಡೆ ಏನೋ ಏರಿಬಿಟ್ಟ ಆಮೆ ಅಲ್ಲಿಂದ ಇಳಿಯಲು ಒದ್ದಾಡಿಬಿಟ್ಟಿದೆ.
ಕಟ್ಟಿಂಗ್ ಮಾಡಲು ಮಚ್ಚು, ಸುತ್ತಿಗೆ ಬಳಸಿದ ಕ್ಷೌರಿಕ….!
ಆಫ್ರಿಕನ್ ಸ್ಪರ್ಡ್ ಆಮೆಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮರಳಿ ಹಿಂದಿನ ಪರಿಸ್ಥಿತಿಗೆ ಬರಲು ಈ ದೈತ್ಯ ಆಮೆ ತನ್ನ ಕೈಯಲ್ಲಿ ಆಗುವ ಅಷ್ಟೂ ಪ್ರಯತ್ನ ಮಾಡಿದರೂ ಏನೂ ಪ್ರಯೋಜನವಾಗಿಲ್ಲ.
ಆಮೆಯ ಪರದಾಟವನ್ನು ಕಂಡ ಮೃಗಾಲಯದ ಸಿಬ್ಬಂದಿಯೊಬ್ಬರು ಅದನ್ನು ಕೆಳಗೆ ಇಳಿಯಲು ನೆರವಾಗಿದ್ದಾರೆ.
https://www.facebook.com/watch/?v=473357770363977&t=1