ಜಗತ್ತಿನಲ್ಲಿ ನಾನಾ ತಳಿಯ ಕಪ್ಪೆಗಳು ಇದ್ದು, ಅನೇಕ ಗಾತ್ರಗಳಲ್ಲಿ ಕಂಡುಬರುತ್ತವೆ. ಜೀವಂತ ಇರುವ ಕಪ್ಪೆಗಳಲ್ಲಿ ಅತ್ಯಂತ ದೊಡ್ಡದಾದ ಗೋಳಿಯಾತ್ ಕಪ್ಪೆಯು 12.5 ಇಂಚುಗಳಷ್ಟು ಉದ್ದವಿದ್ದು, 3.3 ಕೆಜಿ ತೂಗುತ್ತದೆ.
ಕೆಮರೂನ್ ಹಾಗೂ ಈಕ್ವೇಟರಿಯಲ್ ಗಿನೀಯಲ್ಲಿರುವ ಸಣ್ಣ ವಾಸಸ್ಥಾನದಲ್ಲಿ ಈ ತಳಿಯ ಕಪ್ಪೆಗಳು ನೋಡಲು ಸಿಗುತ್ತವೆ. ಆದರೆ ಅವುಗಳ ವಾಸಸ್ಥಾನದ ಗಾತ್ರ ಕ್ಷೀಣಿಸುತ್ತಿರುವ ಕಾರಣ ಈ ಕಪ್ಪೆಗಳ ಸಂಖ್ಯೆ ನಿರಂತರವಾಗಿ ತಗ್ಗುತ್ತಲೇ ಸಾಗಿದೆ.
ಹಿಂದೆಂದೂ ಕಾಣದ ಭೀಕರ ದೃಶ್ಯ; ಗಂಗಾನದಿಯಲ್ಲಿ ನೂರಾರು ಶವಗಳ ರಾಶಿ –ಕಿತ್ತು ತಿನ್ನುತ್ತಿರುವ ನಾಯಿಗಳು
ಆಗತಾನೇ ಜನಿಸಿದ ಮಾನವನ ಮಗುವಷ್ಟು ದೊಡ್ಡದಿರುವ ಈ ಗೋಳಿಯಾತ್ ಕಪ್ಪೆಯನ್ನು ’ಜಗತ್ತಿನ ಅತಿ ದೊಡ್ಡ ಕಪ್ಪೆ’ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಸೋಲೋಮನ್ ದ್ವೀಪವಾಸಿಗಳ ಕಣ್ಣಿಗೆ ಬಿದ್ದ ಈ ಕಪ್ಪೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.