ದಂಪತಿಗಳಿಬ್ಬರಿಗೆ ಏಕಕಾಲದಲ್ಲಿ ವೃತ್ತಿ ಹಾಗೂ ಕೌಟುಂಬಿಕ ವ್ಯವಹಾರಗಳನ್ನು ನಿಭಾಯಿಸಿಕೊಂಡು ಹೋಗಲು ಅನುವಾಗಲು ಹೊಚ್ಚ ಹೊಸ ಕ್ರಮವೊಂದನ್ನು ತೆಗೆದುಕೊಂಡಿದೆ ಜರ್ಮನಿ ಸರ್ಕಾರ.
ಸ್ಲೋವೇನಿಯಾ ದೇಶಕ್ಕೆ ಜರ್ಮನಿಯ ರಾಯಭಾರದ ಕೆಲಸವನ್ನು ನಟಾಲೀ ಕೌಥರ್ ಹಾಗೂ ಆಕೆಯ ಪತಿ ಅಡ್ರಿಯಾನ್ ಪಾಲ್ಮನ್ಗೆ ಜಂಟಿಯಾಗಿ ವಹಿಸಿರುವ ಜರ್ಮನಿಯ ವಿದೇಶಾಂಗ ಸಚಿವರು ಅವರನ್ನು ನಾಲ್ಕು ವರ್ಷಗಳ ಮಟ್ಟಿಗೆ ಸ್ಲೋವೇನಿಯಾಕ್ಕೆ ನಿಯೋಜನೆ ಮಾಡಿದ್ದಾರೆ.
ಈ ದಂಪತಿಗೆ ಮೂವರು ಮಕ್ಕಳಿದ್ದು, ವಿದೇಶಾಂಗ ಸಚಿವಾಲಯದಲ್ಲಿ 2005ರಿಂದ ಕೆಲಸ ಮಾಡುತ್ತಿದ್ದಾರೆ.