ಮನೆಯ ಮಹಡಿ ಮೇಲೆ 25 ಸೆಂಮೀ ಉದ್ದವಿರುವ ಚೀನೀ ಏಡಿಯೊಂದನ್ನು ಕಂಡ ದಕ್ಷಿಣ ಜರ್ಮನಿಯ ಮಹಿಳೆಯೊಬ್ಬರು ಶಾಕ್ ಆಗಿದ್ದಾರೆ.
ಕೂಡಲೇ ತಾನಿರುವ ಫ್ರೈಬರ್ಗ್‌ನ ಪೊಲೀಸರಿಗೆ ಕರೆ ಮಾಡಿ ದೂರು ಕೊಟ್ಟಿದ್ದಾರೆ ಈ ಮಹಿಳೆ. ಸ್ವಿಸ್ ಗಡಿಯ ಸಮೀಪ ಇರುವ ಈ ಮನೆಗೆ ಪೊಲೀಸರು ಬರುವ ಮುನ್ನವೇ ಆ ಮಹಿಳೆ ಕಸದ ಬುಟ್ಟಿಯನ್ನು ಮೇಲೆ ಕೆಳಗೆ ಮಾಡಿ ಏಡಿಯನ್ನು ಹಿಡಿದುಹಾಕಿದ್ದರು.
ಕಂಟೇನರ್ ಒಂದರಲ್ಲಿ ಏಡಿಯನ್ನು ಹಾಕಿಕೊಂಡ ಅಧಿಕಾರಿಗಳು ಅದನ್ನು ಸ್ಥಳೀಯ ಪಶು ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.
ಏಷ್ಯಾದಲ್ಲಿ ಹೆಚ್ಚಾಗಿ ಕಂಡುಬರುವ ಈ ಜಾತಿಯ ಏಡಿಗಳು ಜರ್ಮನಿಯ ಅನೇಕ ನದಿಗಳಲ್ಲಿ ಕಾಣಸಿಗುತ್ತವೆ. ಈ ಮಹಿಳೆಯ ಮನೆ ರ‍್ಹೈನ್ ನದಿಯಿಂದ ಬಹಳ ದೂರದಲ್ಲಿ ಏನೂ ಇಲ್ಲದ ಕಾರಣ ಅದು ಅಲ್ಲಿಂದ ಬಂದಿದೆ. ಈ ಏಡಿಗಳು ಅಪಾಯಕಾರಿಯಲ್ಲ.