ಆಗಸದಲ್ಲಿ ಬೃಹತ್ ಸಿರಿಂಜ್ ಒಂದರ ಕಾಲ್ಪನಿಕ ನಕ್ಷೆಯೊಂದನ್ನು ಬಿಡಿಸಿದ ಜರ್ಮನಿಯ ಪೈಲಟ್ ಸ್ಯಾಮಿ ಕ್ರಾಮರ್, ಯೂರೋಪ್ನಲ್ಲಿ ಕೋವಿಡ್-19 ಲಸಿಕೆ ಕಾರ್ಯಕ್ರಮ ಆರಂಭವನ್ನು ಘೋಷಿಸಿದ್ದಾರೆ.
200 ಕಿ.ಮೀ. ಉದ್ದದ ತಮ್ಮ ಪಥವನ್ನು ಜಿಪಿಎಸ್ ಡಿವೈಸ್ನಲ್ಲಿ ಗುರುತು ಮಾಡಿದ 20 ವರ್ಷದ ಈ ಪೈಲಟ್, ದಕ್ಷಿಣ ಜರ್ಮನಿಯ ಕಾನ್ಸ್ಟೆನ್ಸ್ ಕೆರೆಯ ಬಳಿ ಆಗಸಕ್ಕೆ ಏರಿದ್ದಾರೆ. ಸಿರಿಂಜ್ ಆಕಾರದ ಈ ಮಾರ್ಗವನ್ನು ಫ್ಲೈಟ್ ರಾಡಾರ್24 ಜಾಲತಾಣದಲ್ಲಿ ತೋರಲಾಗಿದೆ.
“ಈಗಲೂ ಸಹ ಅನೇಕ ಜನರು ಈ ಲಸಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ಜನರು ಚಿಂತನೆ ಮಾಡಲಿ ಎಂದು ನಾನು ಹೀಗೆ ಮಾಡಿದ್ದೇನೆ” ಎನ್ನುತ್ತಾರೆ ಕ್ರಾಮರ್.