
ಡಾರ್ಟ್ಮಂಡ್ನ ಬೇಕರಿ ಈ ರೀತಿಯ ವಿಚಿತ್ರವಾದ ಕೇಕುಗಳನ್ನ ತಯಾರು ಮಾಡಿರೋದು ಇದೇ ಮೊದಲೇನಲ್ಲ. ಕಳೆದ ವರ್ಷ ಲಾಕ್ಡೌನ್ ಭೀತಿಯಿಂದ ಸೂಪರ್ ಮಾರ್ಕೆಟ್ಗೆ ಒಂದೊಂದೇ ಅಗತ್ಯ ಸಾಮಗ್ರಿಗಳ ಕಣ್ಮರೆಯಾಗುತ್ತಿದ್ದ ವೇಳೆ ಟಾಯ್ಲೆಟ್ ರೋಲ್ ಆಕಾರದ ಕೇಕ್ಗಳನ್ನ ತಯಾರಿಸಿ ಸುದ್ದಿಯಾಗಿತ್ತು.
ಈಗಾಗಲೇ ಕೊರೊನಾ ಲಸಿಕೆಯನ್ನ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ನೀಡಲಾಗ್ತಿದೆ. ಆದರೂ ಸಹ ಕೆಲವರಿಗೆ ಇನ್ನೂ ಕೊರೊನಾ ಲಸಿಕೆಗಳ ಮೇಳೆ ಅನುಮಾನ ಹೋಗಿಲ್ಲ.
ಹೀಗಾಗಿ ನೀವು ಯಾವುದೇ ಅಡ್ಡಪರಿಣಾಮಗಳಿಲ್ಲದೇ ಈ ಸಿರಿಂಜ್ ಕೇಕ್ನ್ನ ಸ್ವೀಕರಿಸಬಹುದಾಗಿದೆ. ಅಲ್ಲದೇ ನೀವು ಬೇಕು ಅಂದರೆ ಮತ್ತೊಂದು ಸಿರಿಂಜ್ ಖರೀದಿ ಮಾಡಬಹುದು. ಯಾಕೆಂದರೆ ಈ ಸಿರಿಂಜ್ ಬಹಳ ರುಚಿಕರವಾಗಿದೆ ಅಂತಾ ಬೇಕರಿ ಮಾಲೀಕ ಹಾಸ್ಯ ಚಟಾಕಿ ಹಾರಿಸಿದ್ದಾರೆ.