ವರ್ಷಗಳೇ ಕಳೆದರೂ ಸಂಪೂರ್ಣ ವಿಶ್ವ ಕೊರೊನಾ ವೈರಸ್ ಕಾಟದಿಂದ ಇನ್ನೂ ಹೊರಬಂದಿಲ್ಲ. ಈಗಿನ್ನೂ ಲಸಿಕೆಗಳ ಮೂಲಕ ಕೋವಿಡ್ನ್ನು ಹೊಡೆದೊಡಿಸುವ ಪ್ರಯತ್ನದಲ್ಲಿ ಇರುವಾಗಲೇ ಈ ವರ್ಷದ ಗ್ಲೋಬಲ್ ರಿಸ್ಕ್ ರಿಪೋರ್ಟ್ ರೆಡಿಯಾಗಿದೆ. ಈ ರಿಪೋರ್ಟ್ನಲ್ಲಿ ಭೂಮಿಗೆ ಈ ದಶಕದಲ್ಲಿ ಎದುರಾಗಲಿರುವ ಹೊಸ ಸಂಕಷ್ಟದ ಬಗ್ಗೆ ಮಾಹಿತಿ ನೀಡಲಾಗಿದೆ.
ಗ್ಲೋಬಲ್ ರಿಸ್ಕ್ ರಿಪೋರ್ಟ್ನ ಪ್ರಕಾರ ಕೊರೊನಾಕ್ಕಿಂತಲೂ ಭಯಾನವಾದ ಸಂಕಷ್ಟವೊಂದು ಜಗತ್ತನ್ನ ಸುತ್ತುತ್ತಿದೆ. ಮುಂದಿನ 5 ರಿಂದ 10 ವರ್ಷಗಳಲ್ಲಿ ಭೂ ರಾಜನೀತಿಕ ಸ್ಥಿರತೆ ಗಂಭೀರ ಪ್ರಮಾಣದಲ್ಲಿ ದುರ್ಬಲಗೊಳ್ಳಲಿದೆ.
ಗ್ಲೋಬಲ್ ರಿಸ್ಕ್ ರಿಪೋರ್ಟ್ನ ಈ ಮಾತು ನಿಜವಾಗಿದ್ದೇ ಹೌದಾದಲ್ಲಿ ವಿಶ್ವದಲ್ಲಿ ಬಿಲಿಯನ್ಗಟ್ಟಲೇ ನಷ್ಟ ಉಂಟಾಗಲಿದೆ. ಇದರಿಂದ ಮತ್ತೊಮ್ಮೆ ಇಡೀ ವಿಶ್ವಕ್ಕೆ ಆರ್ಥಿಕ ಸಂಕಷ್ಟದ ಕರಿನೆರಳು ಬಂದು ಆವರಿಸಲಿದೆ. ಮುಂದಿನ ದಿನಗಳಲ್ಲಿ ಮಹಾಮಾರಿ, ಆರ್ಥಿಕ ನೀತಿ, ರಾಜನೀತಿಕ ಏರಿಳಿತ ಹಾಗೂ ಹವಾಮಾನ ವೈಪರೀತ್ಯಗಳು ಜಗತ್ತಿಗೆ ಬಹುದೊಡ್ಡ ಸಂಕಷ್ಟಗಳನ್ನೇ ತಂದೊಡ್ಡಲಿದೆ.
2020ರಲ್ಲಂತೂ ಕೊರೊನಾ ಇಡೀ ವಿಶ್ವಕ್ಕೇ ದೊಡ್ಡ ಸಂಕಷ್ಟವನ್ನ ತಂದೊಡ್ಡಿದೆ. ಲಾಕ್ಡೌನ್, ಅಂತಾರಾಷ್ಟ್ರೀಯ ವ್ಯಾಪಾರ ಹಾಗೂ ಪ್ರವಾಸೋದ್ಯಮಕ್ಕೆ ಇದ್ದ ನಿರ್ಬಂಧಗಳ ಜೊತೆಗೆ ವಿವಿಧ ದೇಶಗಳಲ್ಲಿ ಚಂಡಮಾರುತಗಳೂ ಭಾರೀ ದೊಡ್ಡ ಸಂಕಷ್ಟಕ್ಕೆ ಕಾರಣವಾಗಿದ್ದವು.
2021ರಲ್ಲಿ ಗ್ಲೋಬಲ್ ರಿಸ್ಕ್ ರಿಪೋರ್ಟ್ ಫೋರಂನ 650ಕ್ಕೂ ಹೆಚ್ಚು ಸದಸ್ಯರ ಕಠಿಣ ಶ್ರಮದ ಬಳಿಕ ಈ ವರದಿಯನ್ನ ತಯಾರಿಸಲಾಗಿದೆ. ಇಡೀ ವಿಶ್ವದಿಂದ ದಾಖಲೆಗಳನ್ನ ಸಂಗ್ರಹಿಸಿ ಈ ಮಾಹಿತಿಯನ್ನ ಬಹಿರಂಗಪಡಿಸಲಾಗಿದೆ. 2020ರ ಸಂಕಷ್ಟಗಳನ್ನ ನೋಡಿದ ಬಳಿಕ ಟಾಪ್ 10 ವಿಶ್ವ ಸಂಕಷ್ಟದಲ್ಲಿ ಸಾಂಕ್ರಾಮಿಕ ರೋಗವನ್ನ ಮೊದಲ ಸ್ಥಾನದಲ್ಲಿ ಇರಿಸಲಾಗಿದೆ. 2020ರ ಆರಂಭದಲ್ಲಿ ರಿಲೀಸ್ ಆದ ಗ್ಲೋಬಲ್ ರಿಸ್ಕ್ ರಿಪೋರ್ಟ್ನಲ್ಲಿ ಸಾಂಕ್ರಾಮಿಕ ರೋಗವನ್ನ 10ನೇ ಸ್ಥಾನದಲ್ಲಿ ಇಡಲಾಗಿತ್ತು.