alex Certify ಥೇಟ್ ಸ್ಮೈಲಿ ಎಮೋಜಿಯಂತೆ ಕಾಣುತ್ತವೆ ಈ ಜ್ವಾಲಾಶಿಲೆಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥೇಟ್ ಸ್ಮೈಲಿ ಎಮೋಜಿಯಂತೆ ಕಾಣುತ್ತವೆ ಈ ಜ್ವಾಲಾಶಿಲೆಗಳು

ಸ್ಮೈಲೀ ಎಮೋಜಿಗಳಂತೆ ಕಾಣುವ ಅಪರೂಪದ ಕಲ್ಲುಗಳ ಚಿತ್ರಗಳು ಅಂತರ್ಜಾಲದಲ್ಲಿ ಸಖತ್‌ ವೈರಲ್ ಆಗುತ್ತಿವೆ.

ಬ್ರೆಜಿಲ್‌ನ ಸೋಲ್‌ಡೇಡ್‌ನಲ್ಲಿರುವ ಗ್ರಾಂಡೇ ಡೊಲ್ ಸುಲ್ ಪ್ರದೇಶದಲ್ಲಿ ಅಡ್ಡಾಡುತ್ತಿದ್ದ ವೇಳೆ ಅಮೆರಿಕದ ಭೂವಿಜ್ಞಾನಿ ಮೈಕ್ ಬೋವರ್ಸ್‌ಗೆ ಈ ಕಲ್ಲುಗಳು ಸಿಕ್ಕಿವೆ. ಈ ಕಲ್ಲುಗಳನ್ನು ಮಧ್ಯಕ್ಕೆ ಸೀಳಿದಾಗ ಸ್ಮೈಲಿಂಗ್ ಎಮೋಜಿಗಳ ತದ್ರೂಪುಗಳೇ ಕಂಡು ಬಂದಿವೆ. ಜೊತೆಯಲ್ಲಿ ಜನಪ್ರಿಯ ಮಪೆಟ್‌ ಕ್ಯಾರೆಕ್ಟರ್‌ ದಿ ಕುಕೀ ಮಾನ್‌ಸ್ಟರ್‌ ತದ್ರೂಪು ಸಹ ಕಂಡು ಬಂದಿದೆ.

ಜ್ವಾಲಾಶಿಲೆಗಳಾದ ಈ ಕಲ್ಲುಗಳು ನೋಡಲು ಮೊಟ್ಟೆಯ ಆಕೃತಿಯಲ್ಲಿ ಇವೆ. ಇವುಗಳನ್ನು ಅರ್ಧಕ್ಕೆ ಸೀಳಿದಾಗ ಕಡು ನೀಲಿ ಬಣ್ಣದ ಸ್ಫಟಿಕವನ್ನು ಹೊಂದಿದ ಕುಕೀ ಮಾನ್‌ಸ್ಟರ್‌‌ನಂತೆ ಕಾಣುವ ಚೂರುಗಳಾಗಿ ಮೂಡುತ್ತವೆ.

ನವೆಂಬರ್‌ 2020ರಲ್ಲಿ ಕಂಡು ಬಂದ ಈ ವಸ್ತುಗಳ ಬೆಲೆಯು $10,000ಗಳಷ್ಟಾಗಬಹುದು ಎಂಬ ಅಂದಾಜಿದೆ.

https://www.facebook.com/watch/?v=4951035504969551&t=0

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...