alex Certify ಹುಟ್ಟಲಿರುವ ಮಗುವಿನ ಲಿಂಗ ಬಹಿರಂಗಪಡಿಸಲು ಹೋಗಿ ಎಡವಟ್ಟು ಮಾಡಿಕೊಂಡ ತಂದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಟ್ಟಲಿರುವ ಮಗುವಿನ ಲಿಂಗ ಬಹಿರಂಗಪಡಿಸಲು ಹೋಗಿ ಎಡವಟ್ಟು ಮಾಡಿಕೊಂಡ ತಂದೆ

ಮುಂದೆ ಹುಟ್ಟಲಿರುವ ಎರಡನೇ ಮಗುವಿನ ಬಗ್ಗೆ ಪ್ರಕಟಿಸಲು ದಂಪತಿಗಳು ಮನೆಯಲ್ಲೇ ಸಣ್ಣ ಸಂಭ್ರಮಾಚರಣೆ ಹಮ್ಮಿಕೊಂಡಿದ್ದರು. ತಮ್ಮ ಬೇಡ, ತಂಗಿ ಬೇಕು ಎನ್ನುವ ಮಗುವಿನ ಅಳುವಿನೊಂದಿಗೆ ಸಂಭ್ರಮ ಮುಗಿಯುವ ವಿಡಿಯೋ ವೈರಲ್ ಆಗಿದೆ.

ಪತ್ನಿ ಗರ್ಭಿಣಿ ಎಂಬುದನ್ನು ಹಾಗೂ ತಮಗೆ ಮುಂದೆ ಹುಟ್ಟುವ ಮಗುವಿನ ಬಗ್ಗೆ ಪ್ರಕಟಿಸಲು ಜೆಮ್ಮ ಬೇಲಿಫ್ ಪತಿ ಈ ಕಾರ್ಯಕ್ರಮ ಆಯೋಜಿಸಿದ್ದರು. ಸಂಭ್ರಮದಿಂದ ಸಿದ್ಧಗೊಂಡ ದಂಪತಿಗಳು, ಬಣ್ಣದ ಬಲೂನ್, ಬಣ್ಣದ ಕಾಗದದ ಚೂರುಗಳನ್ನು ಸ್ಫೋಟಿಸುವ ಸಾಧನ (ಕನ್ಫೆಟ್ಟಿ ಕೆನಾನ್) ಎಲ್ಲವನ್ನೂ ಸಿದ್ಧಪಡಿಸಿಕೊಂಡಿರುತ್ತಾರೆ.

ಮೊಬೈಲ್ ಕ್ಯಾಮರಾದಲ್ಲಿ ಸಂಭ್ರಮಾಚರಣೆ ರೆಕಾರ್ಡ್ ಆಗುತ್ತಿರುತ್ತದೆ. ಮಗುವಿನ ಕೈಗೆ ಬಲೂನ್ ಗಳನ್ನು ಕೊಟ್ಟು, ಇನ್ನೇನು ಕನ್ಫೆಟ್ಟಿಯನ್ನು ಸಿಡಿಸಬೇಕು ಎನ್ನುವಷ್ಟರಲ್ಲಿ ಕೈಕೊಡುತ್ತದೆ.

ಎದೆ ನಡುಗಿಸುವಂತಿದೆ ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾದವನ ವಿಡಿಯೋ

ಎಷ್ಟು ತಿರುಗಿಸಿದರೂ ಸಿಡಿಯುವುದೇ ಇಲ್ಲ. ಕೊನೆಗೆ ಕೊಳವೆ ಬಿಚ್ಚಿ ನೋಡಲು ಹೋದ ತಂದೆಯ ತೊಡೆಸಂಧಿಗೆ ಸಿಡಿಯುತ್ತದೆ. ನೋವಿನಿಂದ ಬಿದ್ದು ಹೊರಳಾಡುವ ತಂದೆಯನ್ನು ಕಂಡ ಮಗು, ಸಂಭ್ರಮದಿಂದ ನಕ್ಕು ನಲಿಯುತ್ತದೆ.

ಸಾವರಿಸಿಕೊಂಡ ಅಪ್ಪ, ಮಗುವಿನ ಸಂಭ್ರಮದಲ್ಲಿ ತಾನೂ ಭಾಗಿಯಾಗುತ್ತಾನೆ. ಅಲ್ಲಲ್ಲಿ ಬಿದ್ದಿದ್ದ ಬಣ್ಣದ ಕಾಗದ ಚೂರುಗಳನ್ನು ಆಕೆಯ ತಲೆ ಮೇಲೆ ಹಾಕಿ ನಗುತ್ತಾನೆ.

ಈ ಸಂಭ್ರಮ ಇಲ್ಲಿಗೇ ಮುಗಿಯುವುದಿಲ್ಲ. ನಿನ್ನ ಕೈಯಲ್ಲಿರುವ ನೀಲಿ ಬಲೂನ್ ಯಾವ ಮಗುವಿನ ಸಂಕೇತ ಎಂದು ಕೇಳಿದಾಗ, ಹುಡುಗಿಯ ಸಂಕೇತ ಎನ್ನುತ್ತದೆ. ಪದೇ ಪದೇ ಕೇಳಿದಾಗಲೂ ಅದನ್ನೇ ಹೇಳುತ್ತದೆ. ಇಲ್ಲ, ಅದು ಗಂಡುಮಗುವಿನ ಸಂಕೇತ ಎನ್ನುತ್ತಾರೆ. ಬೇಸರಗೊಳ್ಳುವ ಮಗು, ನನಗೆ ತಮ್ಮ ಬೇಡ, ತಂಗಿ ಬೇಕು ಎಂದಳುತ್ತದೆ. ತಬ್ಬಿ ಮುದ್ದಾಡುವ ತಾಯಿ, ಮಗುವನ್ನು ಸಮಾಧಾನಪಡಿಸುತ್ತಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...