ಟರ್ಕಿಯ ಪಶ್ಚಿಮ ಕರಾವಳಿ ಭಾಗದಲ್ಲಿ ಶುಕ್ರವಾರ 7.0 ತೀವ್ರತೆಯ ಭೂಕಂಪ ಸಂಭವಿಸಿದೆ, ಇಸ್ತಾನ್ಬುಲ್ನಿಂದ ಅಥೆನ್ಸ್ವರೆಗೂ ಭೂಕಂಪನದ ಅನುಭವವಾಗಿದೆ.
ಏಜಿಯನ್ ಸಮುದ್ರದಲ್ಲಿ ಭೂಕಂಪ ಅಪ್ಪಳಿಸಿದ್ದು ರಿಕ್ಟರ್ ಮಾಪಕದಲ್ಲಿ ತೀವ್ರತೆ 7.0ರಷ್ಟು ದಾಖಲಾಗಿದೆ. ಟರ್ಕಿಯ ನಗರಗಳಾದ ಇಜ್ಮಿರ್, ಬೊರ್ನೋವಾ ಹಾಗೂ ಬೈರಕ್ಲಿಯಲ್ಲಿ ಭಾರೀ ಭೂಕಂಪದಿಂದಾಗಿ ಅನೇಕ ಕಟ್ಟಡಗಳು ಕುಸಿದಿವೆ, ಇತ್ತೀಚಿನ ವರದಿ ಪ್ರಕಾರ ಭೂಕಂಪನದಿಂದಾಗಿ ಸಾವನ್ನಪ್ಪಿದ್ದವರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ ಹಾಗೂ 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ .
ಭೂಕಂಪ ನಡೆಯುತ್ತಿದ್ದ ವೇಳೆ ಟರ್ಕಿಯ ಗೇಮರ್ ಒಬ್ಬ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಇದ್ದ ಎನ್ನಲಾಗಿದ್ದು ಭೂಕಂಪದ ದೃಶ್ಯಗಳು ಲೈವ್ನಲ್ಲಿ ಸೆರೆಯಾಗಿದೆ. ಲೈವ್ನಲ್ಲಿದ್ದ ಗೇಮರ್ ವೀವರ್ಸ್ಗಳ ಪ್ರಶ್ನೆಗೆ ಉತ್ತರ ನೀಡ್ತಾ ಇದ್ದರು. ಆದರೆ ಕೆಲವೇ ಸೆಕೆಂಡ್ಗಳಲ್ಲಿ ಗೇಮರ್ ಕೂತಿದ್ದ ರೂಮ್ ಅಲುಗಾಡಲು ಆರಂಭಿಸಿದ್ದು ಗಾಬರಿಗೊಂಡ ಗೇಮರ್ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.