ಸಂಚಾರ ನಿಯಮ ಉಲ್ಲಂಘನೆ ಮಾಡಿದ ಕಾರಣ ಕಾರನ್ನು ಅಡ್ಡಗಟ್ಟಿದ ಪೊಲೀಸರ ಮೇಲೆ ಕಾರು ಬಿಟ್ಟ ಆರೋಪದ ಮೇಲೆ ಲಿಬಿಯಾದ ಮಾಜಿ ನಾಯಕ ಮುಅಮ್ಮರ್ ಗಡಾಫಿಯ ಸೊಸೆ ಅಲೈನ್ ಸ್ಕಾಫ್‌ಳನ್ನು ಸಿರಿಯಾದ ಡಮಸ್ಕಸ್ ಪೊಲೀಸರು ಬಂಧಿಸಲು ಮುಂದಾಗಿದ್ದಾರೆ.
ರಸ್ತೆಯಲ್ಲಿದ್ದ ಜನರಿಗೆ ತನ್ನ ಕಾರನ್ನು ಗುದ್ದಿನ ಸ್ಕಾಫ್, ಪೊಲೀಸರು ಹಾಗೂ ಪಾದಚಾರಿಗಳಿಗೆ ಗಾಯಗೊಳಿಸಿ ಸ್ಥಳದಿಂದ ಪರಾರಿಯಾಗಿದ್ದಳು.
ಇದಾದ ಬೆನ್ನಿಗೆ ಆಕೆಯ ಅಂಗರಕ್ಷಕರು ಇದ್ದ ಕಾರಿನಿಂದ ಗನ್‌ಫೈರಿಂಗ್ ಸಹ ನಡೆದಿದೆ ಎನ್ನಲಾಗಿದೆ. ಘಟನೆಯ ಪ್ರತ್ಯಕ್ಷದರ್ಶಿಗಳು ಸಾಕ್ಷಿ ಹೇಳಿರುವ ಕಾರಣದಿಂದ ಆಕೆಯ ಬಂಧನಕ್ಕೆ ಭದ್ರತಾ ಏಜೆನ್ಸಿಗಳು ಮುಂದಾಗಿವೆ.
ನೆಮ್ಮದಿ ಸುದ್ದಿ: ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಕೇಂದ್ರ ಸರ್ಕಾರದಿಂದ ಉಚಿತ ಚಿಕಿತ್ಸೆ
ಮಾಜಿ ಮಾಡೆಲ್ ಸಹ ಆಗಿರುವ ಸ್ಕಾಫ್ ಹೀಗೆ ಪರಾರಿಯಾಗಲು ಪೊಲೀಸ್ ಅಧಿಕಾರಿಯೊಬ್ಬರು ನೆರವಾಗಿದ್ದಾರೆ ಎನ್ನಲಾಗಿದೆ. ಗಡಾಫಿಯ ಐದನೇ ಮಗನಾದ ಹನ್ನಿಬಾಲ್‌ರ ಮಡದಿಯಾಗಿದ್ದಾಳೆ ಸ್ಕಾಫಿ. ಹನ್ನಬಿ ವಿರುದ್ಧ ಸಾಕಷ್ಟು ಕ್ರಿಮಿನಲ್ ಪ್ರಕರಣಗಳು ಇದ್ದು, ತನ್ನ ಸಹಾಯಕರ ಮೇಲೆ ದೌರ್ಜನ್ಯವೆಸಗಿದ ಆಪಾದನೆ ಮೇಲೆ ಸ್ವಿಸ್ ಕಾನೂನು ಪಾಲನಾ ಪಡೆಗಳು ಆತನನ್ನು ಬಂಧಿಸಿದ್ದವು. 1969ರಿಂದ 2011ರವರೆಗೂ ಲಿಬಿಯಾದ ಸರ್ವಾಧಿಕಾರಿಯಾಗಿದ್ದ ಗಡಾಫಿರನ್ನು ಅಕ್ಟೋಬರ್ 2011ರಲ್ಲಿ ಅಲ್ಲಿನ ಕ್ರಾಂತಿಕಾರಿಗಳು ಹಿಡಿದು ಕೊಲೆ ಮಾಡಿದ್ದರು.