ಮೊಬೈಲ್, ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ನಲ್ಲಿ ಸೆಕ್ಸ್ ಚಿತ್ರಗಳನ್ನ ನೋಡುತ್ತಿದ್ದೀರಾ…? ಅದರಲ್ಲಿ ಅಭಿನಯಿಸಿದವರೇ ನಿಮ್ಮನೆಗೆ ಬಾಗಿಲಿಗೆ ಬರುತ್ತಾರೆ ಹುಷಾರ್…!
ಪ್ರೌಢಾವಸ್ಥೆಗೆ ಬಂದ ಮಕ್ಕಳಿಗೆ ಶಾಲೆಯ ಜೀವಶಾಸ್ತ್ರ ಪಠ್ಯದಲ್ಲಿ ಸೆಕ್ಸ್ ಬಗ್ಗೆ ಒಂದಿಷ್ಟು ಪಾಠ ಶುರುವಾಗುತ್ತವೆ. ಅಲ್ಲಿಯವರೆಗೆ ಮಕ್ಕಳಿಗೂ ಈ ಬಗ್ಗೆ ಅಷ್ಟೇನೂ ಗೊತ್ತಿರುವುದಿಲ್ಲ. ನಂತರದ ವಯಸ್ಸಿನಲ್ಲಿ ಕುತೂಹಲ ಹೆಚ್ಚುತ್ತದೆ. ಎಲ್ಲವನ್ನೂ ತರಗತಿಯಲ್ಲಿ ಕೇಳಿ ತಿಳಿದುಕೊಳ್ಳಲಾಗದು. ಹೀಗಾಗಿ ಅನೇಕರು ಮೊರೆ ಹೋಗುವುದು ಪೋರ್ನ್ ಸಿನಿಮಾಗಳತ್ತ.
ಪೋರ್ನ್ ವಿಡಿಯೋಗಳು ಹೇಗೆ ತಯಾರಾಗುತ್ತವೆ ಎಂಬುದರ ಅರಿವಿಲ್ಲದೆ, ಅದನ್ನು ಸತ್ಯವೆಂದು ಭಾವಿಸುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಹದಗೆಡುತ್ತದೆ ಹಾಗೂ ದಾರಿ ತಪ್ಪಿದ ಮಕ್ಕಳಾಗುತ್ತಾರೆ.
ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿಯೇ ನ್ಯೂಜಿಲೆಂಡ್ ಸರ್ಕಾರವು ಪೋರ್ನ್ ತಾರೆಯರನ್ನೇ ಬಳಸಿ ಜಾಹೀರಾತೊಂದನ್ನು ಸಿದ್ಧಿಪಡಿಸಿದೆ. ಲೈಂಗಿಕ ಶಿಕ್ಷಣದ ಬಗ್ಗೆ ಅಭಿಯಾನ ಸಹ ನಡೆಯುತ್ತಿದೆ. ಇದು ಜನಮೆಚ್ಚುಗೆಗೂ ಪಾತ್ರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
https://twitter.com/sir_scandalous/status/1271313939314302982?ref_src=twsrc%5Etfw%7Ctwcamp%5Etweetembed%7Ctwterm%5E1271313939314302982&ref_url=https%3A%2F%2Fwww.timesnownews.com%2Fthe-buzz%2Farticle%2Ffunny-yet-important-new-zealand-ad-campaign-features-porn-stars-to-teach-young-kids-about-consent-watch%2F606793