
ಭಾರತೀಯ ಮೂಲದ ದುಬೈ ನಿವಾಸಿ 20 ವರ್ಷದ ಕಂಟೆಂಟ್ ಮೇಕರ್ ದಿವ್ಯಾ ಪ್ರೇಮಚಂದ್ ತಮ್ಮ ವಿಶೇಷ ಮೇಕಪ್ ಲುಕ್ ಮೂಲಕ ಜಾಲತಾಣದಲ್ಲಿ ಗಮನ ಸೆಳೆದಿದ್ದಾರೆ.
ಅವರ ಇನ್ಸ್ಟಾಗ್ರಾಂ ಖಾತೆಯ ಮೇಲೆ ಒಮ್ಮೆ ಕಣ್ಣಾಡಿಸಿದರೆ ಅವರಿಗೆ ಮೇಕಪ್ ಬಗ್ಗೆ ಇರುವ ಆಸಕ್ತಿಯ ಅರಿವಾಗುತ್ತದೆ. ಮೇಕಪ್ ನ ಎಲ್ಲ ವಿಧಾನಗಳನ್ನೂ ಅರಿತ ಅವರು ವಿವಿಧ ರೂಪದಲ್ಲಿ ಸಿದ್ಧರಾಗಿ ಫೋಟೋಗಳನ್ನು ಹಾಕುತ್ತಾರೆ.
ಭಾರತೀಯರು ಇಷ್ಟ ಪಡುವ ತಿಂಡಿಗಳನ್ನು ಹಿಡಿದುಕೊಂಡು ಅದಕ್ಕೆ ಹೊಂದುವಂಥ ಉಡುಗೆ ತೊಟ್ಟು, ಮೇಕಪ್ ಮಾಡಿಕೊಂಡು ಫೋಟೋ ಶೂಟ್ ಮಾಡಿ ಅಪ್ಲೋಡ್ ಮಾಡಿರುವ ದಿವ್ಯಾ ಈಗ ಹೆಚ್ಚು ಸುದ್ದಿಯಲ್ಲಿದ್ದಾರೆ. ಲೇಸ್ ಚಿಪ್ಸ್, ಮ್ಯಾಗಿ ಮಸಾಲಾ, ಹಲ್ದಿರಾಮ್ಸ್ ಅವರ ಭುಜಿಯಾ ಹಾಗೂ ಪಾಸ್ ಪಾಸ್ ಪ್ಯಾಕೆಟ್‌ಗಳನ್ನು ಹಿಡಿದು ಅದಕ್ಕೆ ಸೂಟ್ ಆಗುವ ಡ್ರೆಸ್ ತೊಟ್ಟು ಪೋಸ್ ನೀಡಿದ್ದಾರೆ.
‘ನನ್ನ ಈ ಪ್ರಯತ್ನಕ್ಕೆ ಅಗಾಧ ಪ್ರತಿಕ್ರಿಯೆ ಬಂದಿದೆ. ಜನರು ನನ್ನೊಟ್ಟಿಗೆ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂದು ನನಗೆ ಖುಷಿಯಾಗುತ್ತದೆ. ನೀವು ಭಾರತದಿಂದ ಹೊರಗಿದ್ದರೆ ಭಾರತೀಯರು ಇಷ್ಟಪಡುವ ತಿಂಡಿಗಳನ್ನು ಅಲ್ಲಿ ಹುಡುಕುವುದು ಕಷ್ಟ’ ಎಂದು ದಿವ್ಯಾ ಹೇಳಿಕೊಂಡಿದ್ದಾರೆ.
https://www.instagram.com/p/CCi41ZvlWag/?utm_source=ig_embed
https://www.instagram.com/p/CCvfzMTl7DC/?utm_source=ig_embed
https://www.instagram.com/p/CDlcYtGlo89/?utm_source=ig_embed
https://www.instagram.com/p/CDEE7fxFh8E/?utm_source=ig_embed