
ಅಮೆರಿಕ ಅಧ್ಯಕ್ಷ ಜೋ ಬಿಡೆನ್ : ಅಮೆರಿಕ ಚುನಾಯಿತ ಅಧ್ಯಕ್ಷ 78 ವರ್ಷದ ಜೋ ಬಿಡೆನ್ ಕಳೆದ ತಿಂಗಳು ಫೈಜರ್ ಲಸಿಕೆ ಸ್ವೀಕರಿಸಿದ್ದಾರೆ. ಲಸಿಕೆ ಸ್ವೀಕರಿಸಿದ ಬಳಿಕ ಬಿಡೆನ್ ದೇಶದ ಆರೋಗ್ಯ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ರು. ಈ ವಾರದ ಮೊದಲು ಬಿಡೆನ್ ಲಸಿಕೆಯ ಎರಡನೇ ಡೋಸ್ನ್ನೂ ಪಡೆದಿದ್ದಾರೆ .
ಅಮೆರಿಕ ಚುನಾಯಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ : ಜೋ ಬಿಡೆನ್ ಲಸಿಕೆ ಪಡೆದ ವಾರದ ಬಳಿಕ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮೊಡೆರ್ನಾ ಲಸಿಕೆ ಸ್ವೀಕರಿಸಿದ್ರು. ಈ ಬಳಿಕ ಮುಂಚೂಣಿ ಕಾರ್ಯಕರ್ತರಿಗೆ ಆಭಾರಿಯಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದರು.
ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ : ಡಿಸೆಂಬರ್ 19ರಂದು ಮೈಕ್ ಪೆನ್ಸ್ ಫೈಜರ್ ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದ್ರು. ಇವರ ಪತ್ನಿ ಕರೆನ್ ಕೂಡ ಆ ದಿನವೇ ಲಸಿಕೆ ಸ್ವೀಕರಿಸಿದ್ದರು.
ರಾಣಿ ಎಲೆಜೆಬೆತ್ ಹಾಗೂ ಪ್ರಿನ್ಸ್ ಫಿಲಿಪ್ : ಕಳೆದ ವಾರ ಬ್ರಿಟಿಷ್ ರಾಣಿ 94 ವರ್ಷದ ಎಲೆಜೆಬೆತ್ ಹಾಗೂ ಆಕೆಯ ಪತಿ 99 ವರ್ಷದ ಪ್ರಿನ್ಸ್ ಫಿಲಿಪ್ ಕೊರೊನಾ ವಿರುದ್ಧದ ಲಸಿಕೆ ಪಡೆದ್ರು.
ಇನ್ನುಳಿದಂತೆ ಇಸ್ರೆಲ್ ಪ್ರಧಾನಿ ಬೆಂಜೆಮಿನ್ ನೆತನ್ಯಾಹು, ಸೌದಿ ಅರೇಬಿಯಾ ರಾಜ ಸಲ್ಮಾನ್, ಫ್ರಾನ್ಸಿಸ್ ಪೋಪ್ ಹಾಗೂ ಮಾಜಿ ಪೋಪ್ ಬೆನೆಡಿಕ್ಟ್, ಇಂಡೋನೇಷಿಯಾ ಅಧ್ಯಕ್ಷ ಜೋಕೋ ವಿಡೊಡೊ, ಹರಿಯಾಣ ಸಚಿವ ಅನಿಲ್ ವಿಜ್ ಕೊರೊನಾ ವಿರುದ್ಧ ಲಸಿಕೆಯನ್ನ ಸ್ವೀಕರಿಸಿದ್ದಾರೆ.
