ಪಾಶ್ಚಾತ್ಯ ದೇಶಗಳಲ್ಲಿ ನೀವು ವಾಸ ಮಾಡಿದವರಾದ್ರೆ ನಿಮಗೆ ಹ್ಯಾಲೋವಿನ್ ವೇಷಗಳ ಪರಿಚಯ ಇದ್ದೇ ಇರುತ್ತೆ. ಅಕ್ಟೋಬರ್ 31ರಂದು ನಡೆದ ಹ್ಯಾಲೋವಿನ್ ಸಂಭ್ರಮದಲ್ಲಿ ವಿದೇಶಿಗರು ವಿಚಿತ್ರ ಉಡುಪುಗಳಲ್ಲಿ ಮಿಂಚಿದ್ದಾರೆ.
ಹ್ಯಾಲೋವಿನ್ ದಿನಕ್ಕೆ ಸೂಕ್ತವಾಗುವಂತಹ ಉಡುಪುಗಳನ್ನ ಆಯ್ಕೆ ಮಾಡೋದೇ ಸವಾಲಿನ ವಿಚಾರ. ಎಲ್ಲರಿಗಿಂತ ಹೆಚ್ಚು ನಾನೇ ಭಯಾನಕವಾಗಿ ಕಾಣಬೇಕು ಎಂಬ ಆಸೆ ಪ್ರತಿಯೊಬ್ಬ ಹ್ಯಾಲೋವನ್ ವೇಷಧಾರಿಯ ಮನಸ್ಸಿನಲ್ಲಿ ಇರುತ್ತೆ. ಆದರೆ ಈ ಬಾರಿ ಕರೊನಾದಿಂದಾಗಿ ಹ್ಯಾಲೋವಿನ್ ಸಂಭ್ರಮಕ್ಕೂ ಹೊಡೆತ ಬಿದ್ದಿದೆ. ಸಾಕಷ್ಟು ನಿರ್ಬಂಧಗಳ ನಡುವೆಯೂ ಜನರು ವಿಚಿತ್ರ ವೇಷಗಳನ್ನ ಧರಿಸಿದ್ದಾರೆ.
ಹ್ಯಾಲೋವಿನ್ ವೇಷ ಧರಿಸಿ ಆಫೀಸ್ಗೆ ಬಂದ ವ್ಯಕ್ತಿಯೊಬ್ಬ ತನ್ನ ಸಹೋದ್ಯೋಗಿಗಳನ್ನ ಪ್ರ್ಯಾಂಕ್ ಮಾಡಿದ್ದು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕಾರ್ಟೂನ್ ಲೋಕದ ಸ್ಮರ್ಫ್ ಪಾತ್ರಧಾರಿಯಾಗಿ ಆಫೀಸ್ಗೆ ಬಂದ ವ್ಯಕ್ತಿ ಸಹೋದ್ಯೋಗಿಗಳನ್ನ ನಗೆಗಡಲಲ್ಲಿ ತೇಲಿಸಿದ್ದಾರೆ.