ಕೊರೋನಾ ಸಾಂಕ್ರಾಮಿಕ ಹರಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಮಾಸ್ಕ್ ಬಳಕೆ ಅನಿವಾರ್ಯ ಎಂಬಂತಾಗಿದೆ. ಈ ವೇಳೆ ಸಾಕಷ್ಟು ಅವಿವೇಕಿಗಳು ಮಾಸ್ಕ್ ಧರಿಸದೇ ಓಡಾಟ ಮಾಡುತ್ತಿದ್ದಾರೆ.
ಒಂದು ಪ್ರಕರಣದಲ್ಲಿ ಬಸ್ ಚಾಲಕ, ತನ್ನ ಪ್ರಯಾಣಿಕನಿಗೆ ಮಾಸ್ಕ್ ಧರಿಸುವಂತೆ ಹೇಳಿ, ಜೀವವನ್ನೇ ಕಳೆದುಕೊಂಡಿದ್ದಾನೆ.
ಫ್ರೆಂಚ್ ಬಸ್ ಚಾಲಕ ಫಿಲಿಪ್ ಮುಂಗಿಲಟ್ ಎಂಬಾತ ಪ್ರಯಾಣಿಕನಿಂದ ಹಲ್ಲೆಗೆ ಒಳಗಾಗಿ ಜೀವ ಕಳೆದುಕೊಂಡಿದ್ದಾರೆ.
ಫ್ರಾನ್ಸ್ ನಲ್ಲಿ ಕೊರೊನ ವೈರಸ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ನಿಯಮದಂತೆ ಮಾಸ್ಕ್ ಧರಿಸಬೇಕೆಂದಿದ್ದರೂ ಬಸ್ ನಲ್ಲಿ ಮೂವರು ಧರಿಸಿರಲಿಲ್ಲ. ಸರ್ಕಾರದ ನಿಯಮಗಳಂತೆ ಮಾಸ್ಕ್ ಧರಿಸುವಂತೆ ಚಾಲಕ ಹೇಳಿದಾಗ, ಆ ಯುವಕರು ಚಾಲಕನ ಮೇಲೆ ಮುಗಿಬಿದ್ದು ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಇದೀಗ ಚಾಲಕನ ಕುಟುಂಬದವರು ಮೌನ ಮೆರವಣಿಗೆ ನಡೆಸಿದರೆ, ಸಹೋದ್ಯೋಗಿಗಳು ಘಟನೆ ಖಂಡಿಸಿ ಪ್ರತಿಭಟಿಸಿದ್ದಾರೆ.